ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಆರಂಭಿಸಿದ್ದು, ಫೆ.26 (ಸೋಮವಾರ)ರಿಂದ ಟಿಕೆಟ್‌ಗಾಗಿ ಅರ್ಜಿ ಸ್ವೀಕಾರ ಮಾಡಲಿದೆ. ಜತೆಗೆ, ಆಯ್ಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿ, ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ 43 ಮಂದಿ ಇರುವ ಚುನಾವಣಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಬೆಂಗಳೂರು : ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಆರಂಭಿಸಿದ್ದು, ಫೆ.26 (ಸೋಮವಾರ)ರಿಂದ ಟಿಕೆಟ್ಗಾಗಿ ಅರ್ಜಿ ಸ್ವೀಕಾರ ಮಾಡಲಿದೆ. ಜತೆಗೆ, ಆಯ್ಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿ, ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ 43 ಮಂದಿ ಇರುವ ಚುನಾವಣಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಕುತೂಹಲಕಾರಿ ಸಂಗತಿಯೆಂದರೆ, ಪಕ್ಷದ ಟಿಕೆಟ್ಗಾಗಿ ಅರ್ಜಿ ಸಲ್ಲಿಸುವವರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಪಕ್ಷ ಸಜ್ಜಾಗಿದ್ದು, ಅರ್ಜಿ ಶುಲ್ಕವು ವಿವಿಧ ಹಂತದ ನಾಯಕರಿಗೆ 1 ಲಕ್ಷ ರು.ದಿಂದ 10 ಸಾವಿರ ರು.ವರೆಗೆ ಇದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಫೆ.26ರಿಂದ ಮಾರ್ಚ್ 5ರವರೆಗೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 10ರ ಸಂಜೆ 5 ಗಂಟೆಯೊಳಗೆ ಪಕ್ಷದ ಕಚೇರಿಗೆ ಸಲ್ಲಿಸಬೇಕು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಸಚಿವರಿಗೆ ಲಕ್ಷ ರು. ಶುಲ್ಕ: ಪಕ್ಷವು ಅರ್ಜಿ ಸಲ್ಲಿಸುವವರು ಹೊಂದಿರುವ ಸ್ಥಾನಮಾನಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿ ಮಾಡಿದೆ. ಅದರಂತೆ ಟಿಕೆಟ್ ಆಕಾಂಕ್ಷಿ ಸಚಿವರಾಗಿದ್ದರೆ ಅವರಿಗೆ ಅರ್ಜಿ ಶುಲ್ಕ 1 ಲಕ್ಷ ರು. ಆಗಿದೆ. ಇನ್ನು ಶಾಸಕರು, ವಿಧಾನಪರಿಷತ್ ಸದಸ್ಯರು, ಮೇಯರ್, ಜಿಲ್ಲಾ ಪಂಚಾ ಯ್ತಿ ಅಧ್ಯಕ್ಷ ಆಕಾಂಕ್ಷಿಗಳಿಗೆ 50 ಸಾವಿರ ರು., ನಿಗಮ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ 25 ಸಾವಿರ ರು., ಪ್ರಧಾನ ಕಾರ್ಯದರ್ಶಿ ಗಳಿಗೆ 20 ಸಾವಿರ ರು., ಮಹಿಳೆಯರಿಗೆ 15 ಸಾವಿರ ಮತ್ತು ಎಸ್ಸಿ ಮತ್ತು ಎಸ್ಟಿ ಟಿಕೆಟ್ ಆಕಾಂಕ್ಷಿಗಳಿಗೆ 10 ಸಾವಿರ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಚುನಾವಣಾ ಸಮಿತಿ: ಸಲ್ಲಿಕೆಯಾಗುವ ಅರ್ಜಿ ಪರಿಶೀಲನೆ ನಡೆಸಿ ಅರ್ಹ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಿ ಹೈಕಮಾಂಡ್ಗೆ ಶಿಫಾರಸು ಮಾಡಲು ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ 43 ಮಂದಿ ಸದಸ್ಯರ ಚುನಾವಣಾ ಸಮಿತಿ ಯನ್ನು ರಚನೆ ಮಾಡಿದೆ.
