ವಿವಿಧ ರಾಜ್ಯಗಳಲ್ಲಿನ ಜನರ ಆರೋಗ್ಯ ಸ್ಥಿತಿಗತಿಯ ಕುರಿತು ನೀತಿ ಆಯೋಗ ಶುಕ್ರವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಮಗ್ರ ಸೂಚ್ಯಂಕದಲ್ಲಿ ಕರ್ನಾಟಕ 9ನೇ ಸ್ಥಾನ ಪಡೆದಿದೆ.

ನವದೆಹಲಿ: ವಿವಿಧ ರಾಜ್ಯಗಳಲ್ಲಿನ ಜನರ ಆರೋಗ್ಯ ಸ್ಥಿತಿಗತಿಯ ಕುರಿತು ನೀತಿ ಆಯೋಗ ಶುಕ್ರವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಮಗ್ರ ಸೂಚ್ಯಂಕದಲ್ಲಿ ಕರ್ನಾಟಕ 9ನೇ ಸ್ಥಾನ ಪಡೆದಿದೆ.

ಉಳಿದಂತೆ ಕೇರಳ ಮೊದಲನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಕರ್ನಾಟಕ 2014-15ನೇ ವರ್ಷದಿಂದ 2015-16ರಲ್ಲಿ 9ನೇ ಸ್ಥಾನದಲ್ಲಿ ದಾಖಲಾಗಿದೆ. ಕೇರಳದ ನಂತರದ ಸ್ಥಾನಗಳಲ್ಲಿ ಪಂಜಾಬ್‌, ತಮಿಳುನಾಡು ಮತ್ತು ಗುಜರಾತ್‌ ಇವೆ.

ಆರೋಗ್ಯವಂತ ರಾಜ್ಯಗಳು, ಪ್ರಗತಿಪರ ಭಾರತ: ರಾಜ್ಯಗಳು ಮತ್ತು ಕೇಂದ್ರಾಡಳಿತಗಳ ರ್ಯಾಂಕ್ ವರದಿ’ ಎಂಬ ವರದಿಯಲ್ಲಿ ಈ ಸೂಚ್ಯಂಕ ಪ್ರಕಟಗೊಂಡಿದೆ. ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶಕ್ಕಿಂತ ಮೊದಲ ಮೂರು ಸ್ಥಾನಗಳಲ್ಲಿ ರಾಜಸ್ಥಾನ, ಬಿಹಾರ, ಒಡಿಶಾ ಸೇರಿವೆ. ವಾರ್ಷಿಕ ಕಾರ್ಯಕ್ಷಮತೆ ಏರಿಕೆಯ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಜಾರ್ಖಂಡ್‌, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಇವೆ.