ಬೆಳಗಾವಿ[ಆ. 30]  ಡಿಸಿಎಂ ಲಕ್ಷ್ಮಣ ಸವದಿಗೆ ಮುಂದಿನ ದಿನದಲ್ಲಿ ಸಿಎಂ ಆಗುವ ಯೋಗ ಇದೆ ಎಂದು ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಬೈಲಹೊಂಗಲ ತಾಲೂಕಿನ ಇಂಚಲ ಮಠದ ಡಾ.ಶಿವಾನಂದ ಭಾರತೀ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಆಗಿದ್ದು ನನಗೆ ಖುಷಿ ತಂದಿದೆ. ಅವರು ಜನರ ಸೇವೆಗೆ ಬಂದಿದ್ದಾರೆ. ಇಂಥ ವ್ಯಕ್ತಿ ನಮ್ಮ ಭಕ್ತ ನಾಗಿದ್ದು ನನಗೆ ಖುಷಿಯಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

ಮುಂದಿನ ದಿನದಲ್ಲಿ ಸವದಿ ಮುಖ್ಯಮಂತ್ರಿ   ಆಗಲಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಮುಂದಿನ ದಿನದಲ್ಲಿ ಉನ್ನತ ಮಟ್ಟದ ಸ್ಥಾನ ಕೊಡಲಿ. ಸವದಿ ಅವರು ಮಠದ ಪರಮ ಭಕ್ತರು. ಲಕ್ಷ್ಮಣ ಸವದಿ ಅವರು ನಿಷ್ಠಾವಂತ ವ್ಯಕ್ತಿ. ತಾರತಮ್ಯವಿಲ್ಲದೆ ರಾಜಕಾರಣ ಮಾಡುವ ಅವರಿಗೆ ಮುಂದಿನ ದಿನದಲ್ಲಿ ಸಿಎಂ ಹುದ್ದೆ ಸಿಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.