ಕಾಂಗ್ರೆಸ್ ನಲ್ಲಿ ಯಾರಿಗೆ ಯಾವ ಮಂತ್ರಿಗಿರಿ : ಫೈನಲ್ ಡಿಸಿಶನ್..?

Karnataka Congress leaders lobby for portfolios as Rahul Gandhi expected to finalise list Today
Highlights

ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಸರ್ಕಾರ ರಚನೆಯಾದರೂ ಸಂಪುಟ ಸರ್ಕಸ್ ಮಾತ್ರ ಇನ್ನೂ ಕೊನೆಗೊಂಡಿಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರಿದಿದ್ದು, ಪಕ್ಷದಲ್ಲಿಯೇ ಪೈಪೋಟಿ ನಡೆಯುತ್ತಿದೆ. ಸದ್ಯ ಯಾರಿಗೆ ಯಾವ ಸ್ಥಾನ ಎನ್ನುವ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಸಭೆ ನಡೆಸಿ ತೀರ್ಮಾನ ಮಾಡಲಿದೆ. 

ಬೆಂಗಳೂರು :  ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಸರ್ಕಾರ ರಚನೆಯಾದರೂ ಸಂಪುಟ ಸರ್ಕಸ್ ಮಾತ್ರ ಇನ್ನೂ ಕೊನೆಗೊಂಡಿಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರಿದಿದ್ದು, ಪಕ್ಷದಲ್ಲಿಯೇ ಪೈಪೋಟಿ ನಡೆಯುತ್ತಿದೆ. ಸದ್ಯ ಯಾರಿಗೆ ಯಾವ ಸ್ಥಾನ ಎನ್ನುವ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಸಭೆ ನಡೆಸಿ ತೀರ್ಮಾನ ಮಾಡಲಿದೆ. 

ದೆಹಲಿಯಲ್ಲಿ ಸಚಿವರ ಫೈನಲ್ ಪಟ್ಟಿಗಾಗಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ನಾಯಕರು ರಾಹುಲ್ ಗಾಂಧಿ ಮುಂದಿಟ್ಟಿದ್ದಾರೆ. 

ಜಾತಿವಾರು ಲೆಕ್ಕಾಚಾರ ಹಾಕಿ ಸಚಿವರ ಆಯ್ಕೆಗೆ ಕೈ ನಾಯಕರು ಆದ್ಯತೆ ನೀಡಿದ್ದಾರೆ. ಹಿರಿಯ ಶಾಸಕರು, ಕಿರಿಯ ಶಾಸಕರು ಹೆಚ್ಚಿರುವ ಪಟ್ಟಿಯನ್ನು ನೋಡಿ ರಾಹುಲ್ ಗಾಂಧಿ ಇಂದು ಅಂತಿಮ ತೀರ್ಮಾನ ಮಾಡಲಿದ್ದಾರೆ. 

ಕಾಂಗ್ರೆಸ್ ಹೈ ಕಮಾಂಡ್ ನೊಂದಿಗೆ ನಡೆಯುವ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಪಾಲ್ಗೊಳ್ಳಲಿದ್ದಾರೆ. 

loader