ಮಾಜಿ ಸಚಿವ ಡಾ.ಖಮರ್ ಉಲ್ ಇಸ್ಲಾಂ ಇನ್ನಿಲ್ಲ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖಮರ್ ಉಲ್ ಇಸ್ಲಾಂ ನಿನ್ನೆ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದಿದ್ದಾರೆ.

ಬೆಂಗಳೂರು(ಸೆ.19): ಮಾಜಿ ಸಚಿವ ಡಾ.ಖಮರ್ ಉಲ್ ಇಸ್ಲಾಂ ಇನ್ನಿಲ್ಲ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖಮರ್ ಉಲ್ ಇಸ್ಲಾಂ ನಿನ್ನೆ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ, ಪರಮೇಶ್ವರ್​, ಕೇರಳ ಮಾಜಿ ಸಿಎಂ ಓಮನ್​ ಚಾಂಡಿ ಸೇರಿದಂತೆ ಹಲವು ನಾಯಕರು ಮಾಜಿ ಸಚಿವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ನಂದಿದುರ್ಗ ರಸ್ತೆಯಲ್ಲಿರುವ ಖಾದ್ರಿಯಾ ಮಸೀದಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದ ಬಳಿಕ ರಸ್ತೆ ಮಾರ್ಗವಾಗಿ ಪಾರ್ಥೀವ ಶರೀರವನ್ನು ಕಲ್ಬುರ್ಗಿಗೆ ಕೊಂಡೊಯ್ಯಲಾಗಿದ್ದು, ಖಮರ್ ಉಲ್ ನಿವಾಸದ ಪಕ್ಕದಲ್ಲಿರುವ ನೋಬೆಲ್ ಶಾಲಾ ಆವರಣದಲ್ಲಿ ಸಂಬಂಧಿಕರಿಗಾಗಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಆ ನಂತರ ನಗರದ ಹೊರವಲಯದ ಕೆಸಿಟಿ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ನ್ಯಾಯಾಲಯ ಹಿಂಬದಿಯ ಖಲಂದರ್ ಖಾನ್ ರುದ್ರ ಭೂಮಿಯಲ್ಲಿ ಇವತ್ತು ಅಂತ್ಯಕ್ರಿಯೆ ನಡೆಯಲಿದೆ.