Asianet Suvarna News Asianet Suvarna News

ವಿಧಾನಪರಿಷತ್:​ ಕಾಂಗ್ರೆಸ್ ಕಡೆಯಿಂದ ಇಬ್ಬರ ಹೆಸರು ಅಂತಿಮ

ಕರ್ನಾಟಕ ವಿಧಾನಪರಿಷತ್​ಗೆ ನಡೆಯಬೇಕಿರುವ ಮೂರು ನಾಮನಿರ್ದೇಶನ ಪೈಕಿ ಕಾಂಗ್ರೆಸ್ ಕಡೆಯಿಂದ ಇಬ್ಬರ ಹೆಸರು ಅಂತಿಮಗೊಂಡಿದೆ. ಅವರ ಹೆಸರುಗಳು ಇಲ್ಲಿದೆ.

Karnataka congress finalized Two names for Upper house
Author
Bengaluru, First Published Oct 28, 2018, 12:34 PM IST
  • Facebook
  • Twitter
  • Whatsapp

ಬೆಂಗಳೂರು, [ಅ.28]: ವಿಧಾನಪರಿಷತ್​ಗೆ ನಡೆಯಬೇಕಿರುವ ಮೂರು ನಾಮನಿರ್ದೇಶನ ಪೈಕಿ ಕಾಂಗ್ರೆಸ್ ಕಡೆಯಿಂದ ಇಬ್ಬರ ಹೆಸರು ಅಂತಿಮಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಯು.ಬಿ.ವೆಂಕಟೇಶ್ ಮತ್ತು ಪ್ರಕಾಶ್ ರಾಥೋಡ್ ಹೆಸರು ಅಂತಿಮಗೊಂಡಿದ್ದು, ಸರ್ಕಾರದಿಂದ ರಾಜ್ಯಪಾಲರಿಗೆ ಪ್ರಸ್ತಾವನೆ ಹೋಗುವುದಷ್ಟೇ ಬಾಕಿ ಇದೆ. 

ರಣಜಿ ಕ್ರಿಕೆಟ್​ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದ ಪ್ರಕಾಶ್ ರಾಥೋಡ್ ಈ ಹಿಂದೆ ಒಂದು ಅವಧಿಗೆ ಪರಿಷತ್ ಸದಸ್ಯರಾಗಿದ್ದರು. ಯು.ಬಿ. ವೆಂಕಟೇಶ್​ರನ್ನು ಯಾವ ಕ್ಷೇತ್ರದಿಂದ ಆಯ್ಕೆ ಮಾಡಲಾಗುತ್ತಿದೆ ಎಂಬುದು ಪಕ್ಷದಲ್ಲಿ ಗೊಂದಲ ಉಂಟುಮಾಡಿದೆ.

ಇನ್ನು ಜೆಡಿಎಸ್ ಕಡೆಯಿಂದ ಯಾರು ಎಂಬ ಬಗ್ಗೆ ಇನ್ನೂ ತೀರ್ವನವಾಗಿಲ್ಲ. ದೇವೇಗೌಡರು ವಿದೇಶ ಪ್ರವಾಸದಿಂದ ವಾಪಸಾದ ಬಳಿಕ ಹೆಸರು ಅಂತಿಮಗೊಳ್ಳಲಿದೆ. 

Follow Us:
Download App:
  • android
  • ios