ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಶಿವಮೊಗ್ಗದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಶಿವಮೊಗ್ಗ, [ಅ.16]: ಮಧು ಬಂಗಾರಪ್ಪನವರು ಚುನಾವಣೆಗೆ ನಿಲ್ಲಲು ನಾವು ದೇವೇಗೌಡರು ಒತ್ತಾಯ ಮಾಡಿದ್ದೇವೆ. ಮಧು ಒಳ್ಳೆ ಹುಡುಗ ಉತ್ತಮ ಹೃದಯವಂತ ಆತನನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವಮೊಗ್ಗದಲ್ಲಿ ಇಂದು [ಮಂಗಳವಾರ] ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 20ನೇ ತಾರೀಕು ನಂತರ ಶಿವಮೊಗ್ಗ ಜಿಲ್ಲೆಯ ಹಳ್ಳಿ-ಹಳ್ಳಿ ಸುತ್ತುತ್ತೇನೆ. ಮುಂದಿನ ಕೇಂದ್ರ ಸರ್ಕಾರದ ಭವಿಷ್ಯದ ಬದಲಾವಣೆಗೆ ಈ ಚುನಾವಣೆ ಮೂಲ. ಪಾಪದ ಹಣದ ಮೂಲಕ ಸರ್ಕಾರ ಕೆಡವಲು ಹೊರಟಿರುವವರಿಗೆ ಬುದ್ದಿ ಕಲಿಸಲು ಈ ಚುನಾವಣೆ ದಿಕ್ಸೂಚಿ.

ಇದು ಕಾಂಗ್ರೆಸ್ ಜೆಡಿಎಸ್ ಸರ್ಕಾರವಲ್ಲ ನಿಮ್ಮ ಸರ್ಕಾರ. ಬಂಗಾರಪ್ಪನವರು ಕೊಟ್ಟಂತಹ ಕೊಡುಗೆ ಆಪಾರ.ಹಾಗಾಗಿ ಈ ಜಿಲ್ಲೆಯಲ್ಲಿ ಬಂಗಾರಪ್ಪನ ಕುಟುಂಬವನ್ನು ಉಳಿಸಲು ಕುಮಾರಸ್ವಾಮಿ ಮನವಿ ಮಾಡಿದರು.