ರೈತರ ಸಾಲ ಮನ್ನಾ ವಿಚಾರದಲ್ಲಿ ಅಂತೂ ಇಂತೂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 15 ದಿನ ಅವಧಿ ಕೊಡಿ ಎಂದು ಕೇಳಿದ್ದ ಮುಖ್ಯಮಂತ್ರಿ ಇದೀಗ ಟ್ವೀಟ್ ಮಾಡುವ ಮೂಲಕ ಸಾಲ ಮನ್ನಾ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ಮಾಧ್ಯಮಗಳು ಮತ್ತು ಜನರಿಗೆ ಉತ್ತರ ನೀಡಿದ್ದಾರೆ.
ಬೆಂಗಳೂರು, ಜೂನ್ 15: ರೈತರ ಸಾಲ ಮನ್ನಾ ವಿಚಾರದಲ್ಲಿ ಅಂತೂ ಇಂತೂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 15 ದಿನ ಅವಧಿ ಕೊಡಿ ಎಂದು ಕೇಳಿದ್ದ ಮುಖ್ಯಮಂತ್ರಿ ಇದೀಗ ಟ್ವೀಟ್ ಮಾಡುವ ಮೂಲಕ ಸಾಲ ಮನ್ನಾ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ಮಾಧ್ಯಮಗಳು ಮತ್ತು ಜನರಿಗೆ ಉತ್ತರ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರೈತರ ಸಾಲವನ್ನು ಯಾವುದೇ ಷರತ್ತುಗಳಿಲ್ಲದೇ ಮನ್ನಾ ಮಾಡುವುದಾಗಿ ಎಚ್ಡಿಕೆ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರೈತರು ಮತ್ತು ಮಾಧ್ಯಮಗಳು ಈ ಬಗ್ಗೆ ನಿರಂತರ ಪ್ರಶ್ನೆ ಮಾಡಿದ್ದವು.
ರೈತರೊಂದಿಗೆ ಸಭೆ ನಡೆಸಿದ್ದ ಕುಮಾರಸ್ವಾಮಿ ಈ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ನನಗೆ 15ದಿನಗಳ ಕಾಲಾವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಜೂನ್ 14 ಕ್ಕೆ 15 ದಿನಗಳ ಕಾಲಾವಲಾಶ ಮುಗಿದಿತ್ತು.
ಪರಂ ಅಪಸ್ವರ: ಒಂದು ಕಡೆ ಕುಮಾರಸ್ವಾಮಿ ಸಾಲ ಮನ್ನಾ ಮಾತನಾಡುತ್ತಿದ್ದರೆ ಇನ್ನೊಂದು ಕಡೆ ಮೈತ್ರಿ ಸರಕಾರದ ಡಿಸಿಎಂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತ ಬಂದಿದ್ದಾರೆ. ಸಾಲ ಮನ್ನಾ ವಿಚಾರ ನಿನ್ನೆ ನಡೆಸ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆಯಾಗಿಲ್ಲ. ಆದರೆ ಇದೀಗ ಕುಮಾರಸ್ವಾಮಿ ಮಾಡಿರುವ ಟ್ವೀಟ್ ಸ್ಪಷ್ಟನೆಯೊಂದನ್ನು ನೀಡಿದಂತೆ ಆಗಿದೆ.
