ಏ.18ರಂದು ಬೆಳಗ್ಗೆ 10:30ಕ್ಕೆ ಜೀವಶಾಸ್ತ್ರ, ಮಧ್ಯಾಹ್ನ 2:30ಕ್ಕೆ ಗಣಿತ, 19ರಂದು ಬೆಳಗ್ಗೆ 10:30ಕ್ಕೆ ಭೌತಶಾಸ್ತ್ರ, ಮಧ್ಯಾಹ್ನ 2:30ಕ್ಕೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಈ ನಾಲ್ಕೂ ಪರೀಕ್ಷೆಗಳೂ ತಲಾ 60 ಅಂಕ ಹೊಂದಿವೆ.

ಬೆಂಗಳೂರು: 2018ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳಾಪಟ್ಟಿ ಪ್ರಕಟಗೊಂಡಿದೆ. ಏಪ್ರಿಲ್ 18ರಿಂದ 20ರವರೆಗೆ ನಡೆಯಲಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದ್ವಿತೀಯ ಪಿಯು ಮತ್ತು ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿ ಕೂಡ 2 ವಾರ ಮುಂಚಿತವಾಗಿ ನಡೆಯುತ್ತಿದೆ. ಹೀಗಾಗಿ 15 ದಿನಗಳ ಮೊದಲೇ ಪರೀಕ್ಷೆ ನಡೆಸಲು ಕೆಇಎ ಮುಂದಾಗಿದೆ. ಏ.18ರಂದು ಬೆಳಗ್ಗೆ 10:30ಕ್ಕೆ ಜೀವಶಾಸ್ತ್ರ, ಮಧ್ಯಾಹ್ನ 2:30ಕ್ಕೆ ಗಣಿತ, 19ರಂದು ಬೆಳಗ್ಗೆ 10:30ಕ್ಕೆ ಭೌತಶಾಸ್ತ್ರ, ಮಧ್ಯಾಹ್ನ 2:30ಕ್ಕೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಈ ನಾಲ್ಕೂ ಪರೀಕ್ಷೆಗಳೂ ತಲಾ 60 ಅಂಕ ಹೊಂದಿವೆ. ಏಪ್ರಿಲ್ 20ರಂದು ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಇದ್ದು ಅದಕ್ಕೆ 50 ಅಂಕ ನಿಗದಿ ಮಾಡಲಾಗಿದೆ.

ಸಿಇಟಿ ಪರೀಕ್ಷೆ ವೇಳಾಪಟ್ಟಿ
ಏಪ್ರಿಲ್ 18:
ಬೆಳಗ್ಗೆ 10:30 - ಜೀವಶಾಸ್ತ್ರ
ಮಧ್ಯಾಹ್ನ 2:30 - ಗಣಿತ

ಏಪ್ರಿಲ್ 19:
ಬೆಳಗ್ಗೆ 10:30 - ಭೌತಶಾಸ್ತ್ರ
ಮಧ್ಯಾಹ್ನ 2:30 - ರಸಾಯನಶಾಸ್ತ್ರ

ಏಪ್ರಿಲ್ 20:
ಬೆಳಗ್ಗೆ 11:30-12:30 - ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ

epaperkannadaprabha.com