ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದು 10 ದಿನ ಕಳೆದರೂ ಕಗ್ಗಾಂಟ್ಟಾಗಿ ಉಳಿದಿದ್ದ ಸಚಿವ ಸಂಪುಟ ರಚನೆಯು ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಮುಟ್ಟಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್‌  ಯಾವ್ಯಾವ ಖಾತೆಗಳನ್ನು ಇಟ್ಟುಕೊಳ್ಳಲಿವೆ ಎಂಬುವುದನ್ನು ಉಭಯಪಕ್ಷಗಳ ನಾಯಕರು ಇಂದು ಪ್ರಕಟಿಸಿದ್ದಾರೆ. 

ಬೆಂಗಳೂರು (ಜೂ. 01):  ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದು 10 ದಿನ ಕಳೆದರೂ ಕಗ್ಗಂಟಾಗಿ ಉಳಿದಿದ್ದ ಸಚಿವ ಸಂಪುಟ ರಚನೆಯು ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಮುಟ್ಟಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್‌ ಯಾವ್ಯಾವ ಖಾತೆಗಳನ್ನು ಇಟ್ಟುಕೊಳ್ಳಲಿವೆ ಎಂಬುವುದನ್ನು ಉಭಯಪಕ್ಷಗಳ ನಾಯಕರು ಇಂದು ಪ್ರಕಟಿಸಿದ್ದಾರೆ.

Add Asianetnews Kannada as a Preferred SourcegooglePreferred

ಖಾಸಗಿ ಹೊಟೇಲ್’ನಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ನಡೆಸಿದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಭಾಗಿಯಾಗಿ ಸಚಿವ ಸಂಪುಟ ರಚನೆ ಬಗ್ಗೆ ಮಾಹಿತಿ ನೀಡಿದರು.

ನೂತನ ಮಂತ್ರಿಮಂಡಲವು ಮುಂದಿನ ಬುಧವಾರ [ಜೂ.6] ಕ್ಕೆ ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದೆ.

ಮೈತ್ರಿ ಸರ್ಕಾರದ ಸಚಿವ ಸಂಪುಟ ಸ್ವರೂಪ ಹೀಗಿರಲಿದೆ

ಜೆಡಿಎಸ್ಕಾಂಗ್ರೆಸ್
1ಮಾಹಿತಿ, ಜಿಎಡಿ, ಗುಪ್ತಚರ, ಯೋಜನೆ ಮತ್ತು ಅಂಕಿಅಂಶ1 ಗೃಹ ಇಲಾಖೆ
2 ಹಣಕಾಸು ಮತ್ತು ಅಬಕಾರಿ2ನೀರಾವರಿ
3ಲೋಕೋಪಯೋಗಿ3ಬೆಂಗಳೂರು ನಗರಾಭಿವೃದ್ದಿ
4ಇಂಧನ4ಬೃಹತ್ ಕೈಗಾರಿಕೆ
5ಸಹಕಾರ5ಆರೋಗ್ಯ ಮತ್ತು ಕುಟುಂಬ ಕಲ್ಯಾಣ
6ಪ್ರವಾಸೋದ್ಯಮ6ಕಂದಾಯ ಮತ್ತು ಮುಜುರಾಯಿ
7ವೈದ್ಯಕೀಯ ಶಿಕ್ಷಣ7ನಗರಾಭಿವೃದ್ದಿ
8ಪಶುಸಂಗೋಪನೆ ಮತ್ತು ಮೀನುಗಾರಿಕೆ8ಕೃಷಿ
9ಸಣ್ಣಕೈಗಾರಿಕೆ9ವಸತಿ
10ತೋಟಗಾರಿಕೆ ಮತ್ತು ರೇಷ್ಮೆ ಕೃಷಿ 10ಸಮಾಜ ಕಲ್ಯಾಣ
11ಸಾರಿಗೆ11ಅರಣ್ಯ ಮತ್ತು ಪರಿಸರ
12ಸಣ್ಣ ನೀರಾವರಿ12ಕಾರ್ಮಿಕ ಇಲಾಖೆ
13ಗಣಿ ಮತ್ತು ಭೂ ವಿಜ್ಞಾನ ಇಲಾಖೆ
14ಮಹಿಳಾ ಮತ್ತು ಮಕ್ಕಳ ಕಲ್ಯಾಣ
15ಆಹಾರ ನಾಗರಿಕ ಸರಬರಾಜು
16ಹಜ್, ವಕ್ಫ್, ಮತ್ತು ಅಲ್ಪಸಂಖ್ಯಾತ
17ಕಾನೂನು ಮತ್ತು ಸಂಸದೀಯ ಖಾತೆ
18ವಿಜ್ಞಾನ ಮತ್ತು ತಂತ್ರಜ್ಞಾನ
19ಯುವಜನ, ಕ್ರೀಡೆ ಮತ್ತು ಕನ್ನಡ ಸಂಸ್ಕೃತಿ
20ಬಂದರು ಮತ್ತು ಒಳನಾಡು ಸಾರಿಗೆ
21ವೈದ್ಯಕೀಯ ಶಿಕ್ಷಣ
22ಗ್ರಾಮೀಣಾಭಿವೃದ್ಧಿ