Asianet Suvarna News Asianet Suvarna News

ಸಂಪುಟ ವಿಸ್ತರಣೆ ತೀರ್ಮಾನ : ಯಾರು ಇನ್, ಯಾರು ಔಟ್..?

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನನು ಶುಕ್ರವಾರ ಭೇಟಿ ಮಾಡಲಿದ್ದಾರೆ. ಈ ವೇಳೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 

Karnataka Cabinet Expantion On December 22 Who Is Out Who Is In
Author
Bengaluru, First Published Dec 21, 2018, 7:24 AM IST

ಬೆಂಗ​ಳೂರು :  ಸಚಿವ ಸಂಪುಟ ವಿಸ್ತ​ರಣೆ ಡಿ.22ಕ್ಕೆ ನಡೆ​ಯು​ವುದೋ ಅಥವಾ ಮುಂದೂ​ಡಿಕೆ ಕಾಣು​ವುದೋ? ನಡೆ​ಯ​ಲಿ​ರುವುದು ವಿಸ್ತ​ರ​ಣೆಯೋ ಅಥವಾ ಪುನರ್‌ ರಚ​ನೆಯೋ? ಯಾರಿ​ಗೆ ಸಂಪು​ಟ​ ಸೇರುವ ಅದೃಷ್ಟ, ಯಾರಿಗೆ ಸಿಗ​ಬಹುದು ಕೊಕ್‌?

ಈ ಎಲ್ಲಾ ಪ್ರಶ್ನೆ​ಗ​ಳಿಗೆ ಉತ್ತ​ರ ಕಂಡುಕೊಳ್ಳಲು ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ನೇತೃ​ತ್ವ​ದಲ್ಲಿ ರಾಜ್ಯ ನಾಯ​ಕರ ತಂಡ ದೆಹ​ಲಿಗೆ ತೆರ​ಳಿದ್ದು, ಶುಕ್ರ​ವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವ​ರನ್ನು ಭೇಟಿ ಮಾಡ​ಲಿ​ದ್ದಾರೆ. ಈ ಭೇಟಿಯ ನಂತರ ಸಚಿವ ಸಂಪು​ಟಕ್ಕೆ ಸಂಬಂಧಿ​ಸಿದಂತೆ ಮೂಡಿ​ರುವ ಎಲ್ಲಾ ಗೊಂದ​ಲ​ಗಳು ಬಹು​ತೇಕ ಸ್ಪಷ್ಟ​ವಾ​ಗುವ ಸಾಧ್ಯ​ತೆ​ಯಿದೆ. ಎಲ್ಲ​ಕ್ಕಿಂತ ಮುಖ್ಯ​ವಾಗಿ ಸಂಪುಟ ವಿಸ್ತ​ರಣೆ ವಿಚಾ​ರ​ದಲ್ಲಿ ಸಿದ್ದ​ರಾ​ಮಯ್ಯ ಸೇರಿ​ದಂತೆ ರಾಜ್ಯ ನಾಯ​ಕರು ಖಚಿ​ತ​ವಾಗಿ ನೀಡು​ತ್ತಿದ್ದ ಭರ​ವ​ಸೆ​ಗಳು ಅಸ​ಲಿಯೋ ಅಥವಾ ಅತೃ​ಪ್ತರ ಮೂಗಿಗೆ ಹಚ್ಚಿದ ಬೆಣ್ಣೆಯೋ ಎಂಬುದು ಇತ್ಯ​ರ್ಥ​ವಾ​ಗ​ಲಿ​ದೆ.

ರಾಹುಲ್‌ ಗಾಂಧಿ ಅವರ ಭೇಟಿ​ಗಾಗಿ ಗುರು​ವಾರ ಸಂಜೆ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌, ಉಪ ಮುಖ್ಯ​ಮಂತ್ರಿ ಡಾ. ಜಿ. ಪರ​ಮೇ​ಶ್ವರ್‌, ಸಚಿ​ವ​ರಾದ ಕೆ.ಜೆ. ಜಾಜ್‌ರ್‍ ಅವರು ವಿಶೇಷ ವಿಮಾ​ನ​ದಲ್ಲಿ ದೆಹ​ಲಿಗೆ ತೆರ​ಳಿ​ದರು. ಈ ನಾಯ​ಕರು ಗುರು​ವಾರ ತಡ​ರಾತ್ರಿ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಅವ​ರೊಂದಿಗೆ ಪ್ರಾಥ​ಮಿಕ ಹಂತದ ಚರ್ಚೆ ನಡೆ​ಸಿದ್ದು, ಅನಂತರ ಶುಕ್ರ​ವಾರ ಬೆಳಗ್ಗೆ ರಾಹುಲ್‌ ಗಾಂಧಿ ಅವ​ರನ್ನು ಭೇಟಿ ಮಾಡ​ಲಿ​ದ್ದಾ​ರೆ.

ಅಜೆಂಡಾ ಏನು?:

‘ಪ್ರಾಥ​ಮಿಕ ಹಂತದ ಚರ್ಚೆಯ ವೇಳೆ ಅಸ​ಲಿಗೆ ಈಗ ಸಂಪುಟ ವಿಸ್ತ​ರಣೆ ಮಾಡ​ಬೇಕೋ ಅಥವಾ ಬೇಡವೋ ಎಂಬ ಬಗ್ಗೆ ವಿಶದ​ವಾಗಿ ಚರ್ಚೆ​ಯಾಗುವ ಸಾಧ್ಯ​ತೆ​ಯಿದೆ ಎನ್ನ​ಲಾ​ಗಿದೆ. ಸಂಪುಟ ವಿಸ್ತ​ರಣೆ ಮಾಡಿ​ದರೆ ಅದ​ರಿಂದ ಉದ್ಭ​ವ​ವಾ​ಗುವ ಭಿನ್ನ​ಮತ ಯಾವ ರೀತಿ ಪಕ್ಷ ಹಾಗೂ ಸರ್ಕಾ​ರದ ಮೇಲೆ ಪರಿ​ಣಾಮ ಬೀರ​ಬ​ಹುದು ಮತ್ತು ವಿಸ್ತ​ರಣೆ ಮಾಡ​ದಿ​ದ್ದರೆ ಅದ​ರಿಂದಾ​ಗುವ ಪರಿ​ಣಾ​ಮ​ಗ​ಳೇ​ನಾ​ಗ​ಬ​ಹುದು ಎಂಬುದು ಚರ್ಚೆಗೆ ಬರ​ಬ​ಹುದು. ಇದೇ ವೇಳೆ ಸಂಪುಟ ಪುನರ್‌ ರಚನೆ ಮಾಡು​ವು​ದ​ರಿಂದ ಆಗ​ಬ​ಹುದಾದ ಪರಿ​ಣಾಮ ಕುರಿತು ಸಮಾ​ಲೋ​ಚ​ನೆ​ಯನ್ನು ನಾಯ​ಕರು ನಡೆ​ಸ​ಬ​ಹುದು’ ಎನ್ನ​ಲಾ​ಗಿ​ದೆ.

ರಾಜ್ಯ ಸಚಿವ ಸಂಪುಟ ಡಿ. 22ರಂದು ನಡೆ​ಯ​ಲಿದೆ ಎಂದು ಸಿದ್ದ​ರಾ​ಮಯ್ಯ ಹಾಗೂ ದಿನೇಶ್‌ ಗುಂಡೂ​ರಾವ್‌ ಅವರು ಖಚಿ​ತ​ವಾಗಿ ಹೇಳು​ತ್ತಿ​ದ್ದರೂ ಈ ಕುರಿತು ಹಲವು ಗೊಂದ​ಲ​ಗ​ಳಿವೆ. ಸಂಪುಟ ವಿಸ್ತ​ರಣೆ ಡಿ. 22ಕ್ಕೆ ನಡೆ​ಯು​ವುದೇ ಅಥವಾ ಒಂದೆ​ರಡು ದಿನ ತಡ​ವಾಗಿ ನಡೆ​ಯು​ವುದೋ ಎಂಬ ಪ್ರಶ್ನೆ​ಯಿದೆ. ಜತೆಗೆ, ನಡೆ​ಯ​ಲಿ​ರು​ವುದು ಸಂಪುಟ ವಿಸ್ತ​ರ​ಣೆಯೋ ಅಥವಾ ಪುನ​ರ​ಚ​ನೆಯೋ ಎಂಬ ಗೊಂದ​ಲವೂ ಇದೆ. ಇದೆ​ಲ್ಲಕ್ಕೂ ಮಿಗಿ​ಲಾಗಿ ಸಂಪುಟ ವಿಸ್ತ​ರಣೆ ಎಂಬುದು ಶಾಸ​ಕಾಂಗ ಪಕ್ಷದ ಸಭೆ ಹಾಗೂ ಅಧಿ​ವೇ​ಶ​ನ​ವನ್ನು ಸಾಂಗೋ​ಪಾಂಗ​ವಾಗಿ ನಡೆ​ಸಲು ಈ ತಂತ್ರ ಹೂಡಿ​ದರೇ ಎಂಬ ಅನು​ಮಾ​ನ​ಗಳು ಕಾಂಗ್ರೆಸ್‌ ವಲ​ಯ​ದ​ಲ್ಲಿದೆ.

ಯಾರು ಇನ್‌, ಔಟ್‌?:

ಒಂದು ವೇಳೆ ಪುನರ್‌ ರಚ​ನೆಗೆ ಮನಸ್ಸು ಮಾಡಿ​ದರೆ, ಸಚಿ​ವ​ರಾದ ಶಂಕರ್‌, ವೆಂಕ​ಟ​ರ​ಮ​ಣ್ಣಪ್ಪ, ಜಯ​ಮಾಲಾ ಅವರಿಗೆ ಕೊಕ್‌ ದೊರೆ​ಯುವ ಸಾಧ್ಯ​ತೆ​ಯಿದೆ. ಇದ​ಲ್ಲದೆ, ಪ್ರಭಾವಿ ಸಚಿ​ವ​ರಾದ ಆರ್‌.ವಿ. ದೇಶ​ಪಾಂಡೆ, ಕೃಷ್ಣ ಬೈರೇ​ಗೌಡ ಅವ​ರಂತಹ ನಾಯ​ಕ​ರನ್ನು ಲೋಕ​ಸಭೆ ಚುನಾ​ವ​ಣೆಗೆ ಸ್ಪರ್ಧಿ​ಸಲು ಹೈಕ​ಮಾಂಡ್‌ ಹೇಳಿ​ದರೆ ಆಗ ಅವ​ರು ಸಚಿವ ಸ್ಥಾನ ತೊರೆದು ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆ​ದು​ಕೊ​ಳ್ಳು​ತ್ತಾರೆ ಎಂದು ಹೇಳ​ಲಾ​ಗು​ತ್ತಿದೆ. ಇದ​ಲ್ಲದೆ, ಪದೇ ಪದೇ ಬಿಜೆ​ಪಿ​ಯ​ವ​ರೊಂದಿಗೆ ಗುರು​ತಿ​ಸಿ​ಕೊಂಡು ಕಾಂಗ್ರೆಸ್‌ ಪಕ್ಷ​ವನ್ನು ಮುಜು​ಗ​ರಕ್ಕೆ ಒಳ​ಗಾ​ಗಿ​ಸು​ತ್ತಿ​ರುವ ರಮೇಶ್‌ ಜಾರ​ಕಿ​ಹೊಳಿ ಬಗ್ಗೆ ಯಾವ ಕ್ರಮ ಕೈಗೊ​ಳ್ಳ​ಬೇಕು ಎಂಬ ಬಗ್ಗೆಯೂ ನಾಯ​ಕರು ಹೈಕ​ಮಾಂಡ್‌​ನಲ್ಲಿ ಚರ್ಚೆ ನಡೆ​ಸ​ಲಿ​ದ್ದಾರೆ ಎನ್ನಲಾ​ಗಿದೆ.

ರಮೇಶ್‌ ಅವ​ರನ್ನು ಕೈ ಬಿಟ್ಟು ಅವರ ಸಹೋ​ದರ ಸತೀಶ್‌ ಜಾರ​ಕಿ​ಹೊಳಿ ಅವ​ರನ್ನು ಸಂಪು​ಟಕ್ಕೆ ತೆಗೆ​ದು​ಕೊ​ಳ್ಳುವ ಚಿಂತ​ನೆಯೂ ಇದೆ. ಆದರೆ, ಇದು ರಮೇಶ್‌ ಅವ​ರನ್ನು ಕೈ ಬಿಡು​ವು​ದ​ರಿಂದ ಪಕ್ಷ ಹಾಗೂ ಸರ್ಕಾ​ರದ ಮೇಲೆ ಆಗುವ ಪರಿ​ಣಾ​ಮ​ಗ​ಳನ್ನು ಅವ​ಲೋ​ಕಿ​ಸಬೇ​ಕಾದ ಅಗ​ತ್ಯ​ವಿದೆ. ಏಕೆಂದರೆ, ರಮೇಶ್‌ ಅವ​ರೊಂದಿಗೆ ನಾಲ್ಕಾರು ಮಂದಿ ಶಾಸ​ಕರು ಗುರು​ತಿ​ಸಿ​ಕೊಂಡಿದ್ದು, ಇಂತಹ ಬೆಳ​ವ​ಣಿಗೆ ನಡೆ​ದರೇ ಅವರು ಯಾವ ನಿರ್ಧಾರ ಕೈಗೊ​ಳ್ಳ​ಬ​ಹುದು ಎಂಬ ಆತಂಕವೂ ಇದೆ.

ಸಚಿವ ಸ್ಥಾನ​ಕ್ಕಾಗಿ ಪೈಪೋಟಿ ನಡೆ​ಸು​ತ್ತಿ​ರುವ ಶಾಸ​ಕ​ರು

ಲಿಂಗಾ​ಯತ: ಎಂ.ಬಿ. ಪಾಟೀಲ್‌, ಬಿ.ಸಿ. ಪಾಟೀಲ್‌, ಬಿ.ಕೆ. ಸಂಗ​ಮೇಶ್‌ ಮತ್ತು ಶಾಮ​ನೂರು ಶಿವ​ಶಂಕ​ರ​ಪ್ಪ, ಲಕ್ಷ್ಮೇ ಹೆಬ್ಬಾ​ಳ​ಕರ್‌

ಅಲ್ಪ​ಸಂಖ್ಯಾ​ತ​: ರಹೀಂ ಖಾನ್‌​, ತನ್ವೀರ್‌ಸೇಠ್‌ ಮತ್ತು ರೋಷನ್‌ ಬೇಗ್‌

ಕುರು​ಬ: ಸಿ.ಎಸ್‌. ಶಿವ​ಳ್ಳಿ, ಎಂ.ಟಿ.ಬಿ. ನಾಗ​ರಾ​ಜ್‌

ನಾಯ​ಕ: ಇ. ತುಕಾರಾಂ, ಸತೀಶ್‌ ಜಾರ​ಕಿ​ಹೊಳಿ, ನಾಗೇಂದ್ರ, ರಘು​ಮೂ​ರ್ತಿ

ಪರಿಶಿಷ್ಟಎಡಗೈ: ಆರ್‌.ಬಿ. ತಿಮ್ಮಾ​ಪುರ, ರೂಪಾ ಶಶಿ​ಧ​ರ್‌

ಒಕ್ಕ​ಲಿ​ಗ: ಡಾ. ಸುಧಾ​ಕರ್‌, ಎಸ್‌.ಟಿ. ಸೋಮ​ಶೇ​ಖರ್‌, ಎಂ. ಕೃಷ್ಣಪ್ಪ

ರೆಡ್ಡಿ: ರಾಮ​ಲಿಂಗಾ​ರೆಡ್ಡಿ

ಒಬಿಸಿ: ಅಂಜಲಿ ನಿಂಬಾ​ಳ್ಕರ್‌

ಸ್ಥಾನ ನಷ್ಟಸಾಧ್ಯತೆ

ಆರ್‌. ಶಂಕ​ರ್‌, ಅರಣ್ಯ

ವೆಂಕ​ಟ​ರ​ಮ​ಣ​ಪ್ಪ, ಕಾರ್ಮಿಕ

ಜಯ​ಮಾ​ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ರಮೇಶ್‌ ಜಾರ​ಕಿ​ಹೊ​ಳಿ, ಪೌರಾ​ಡ​ಳಿತ


ಲೋಕಸಭೆಗೆ ಸ್ಪರ್ಧಿಸಿದರೆ ಇವರ ಸ್ಥಾನ ನಷ್ಟ

ಆರ್‌.ವಿ. ದೇಶ​ಪಾಂಡೆ, ಕಂದಾಯ

ಕೃಷ್ಣ​ ಬೈ​ರೇ​ಗೌಡ, ಆರ್‌​ಡಿ​ಪಿ​ಆರ್‌

Follow Us:
Download App:
  • android
  • ios