ಬೆಂಗಳೂರು[ಡಿ.05]  ರಾಜ್ಯ ಸಚಿವ ಸಂಪುಟ ವಿಸ್ತರಣೆ ಡಿಸೆಂಬರ್‌ 22ಕ್ಕೆ  ಆಗಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ಸಂಜೆ ನಡೆದ ಸಮನ್ವಯ ಸಮಿತಿ ಸಭೆ ಬಳಿಕ ಮಾಧ್ಯಮಗಳಿಗೆ ವಿವರ ನೀಡಿದರು. ನಿಮಗೆ ನಿಜ ಹೇಳಬೇಕು ಎಂದರೆ ಡಿಸೆಂಬರ್ 9 ರಂದೇ ಸಂಪುಟ ವಿಸ್ತರಣೆ ಆಗಬೇಕಾಗಿತ್ತು.. ಆದರೆ ಡಿಸೆಂಬರ್‌ ಮರುದಿನ ಅಂದರೆ ಡಿಸೆಂಬರ್ 10 ರಂದು ಬೆಳಗಾವಿ ಅಧಿವೇಶನ ಆರಂಭವಾಗುವ ಕಾರಣಕ್ಕೆ ಮುಂದಕ್ಕೆ ಹಾಕಿದ್ದೇವೆ ಎಂದು ತಿಳಿಸಿದರು.

ಸಂಪುಟದಲ್ಲಿ ಒಟ್ಟು 8 ಸ್ಥಾನಗಳು ಖಾಲಿ ಇವೆ. ಇದರಲ್ಲಿ 6 ಸ್ಥಾನ ಕಾಂಗ್ರೆಸ್ ಪಾಲಿನದ್ದಾಗಿದ್ದರೆ ಇನ್ನುಳಿದ ಎರಡು ಸ್ಥಾನ ಜೆಡಿಎಸ್‌ಗೆ ಸೇರಿದ್ದು. ಜೆಡಿಎಸ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲವಾದರೂ ಕಾಂಗ್ರೆಸ್‌ನಲ್ಲಿ 6 ಸ್ಥಾನಗಳಿಗೆ ಪೈಪೋಟಿ ಇದೆ. ರಾಮಲಿಂಗಾರೆಡ್ಡಿ, ಎಂಬಿ ಪಾಟೀಲ್, ಬಿಸಿ ಪಾಟೀಲ್, ಡಾ.ಸುಧಾಕರ, ಎಂಟಿಬಿ ನಾಗರಾಜ್, ಆನಂದ್ ಸಿಂಗ್ ಸೇರಿದಂತೆ ಅನೇಕರು ಈ ಬಾರಿ ಸಚಿವ ಸ್ಥಾನದ ಆಸೆಯಲ್ಲಿದ್ದಾರೆ.