ಸಚಿವ ಸ್ಥಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. 

ಬೆಂಗಳೂರು,(ಅ.05): ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಸೆ ಇಟ್ಟುಕೊಂಡು ಕಾಯುತ್ತಿರುವ ಅತೃಪ್ತ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ.

 ಸಂಪುಟ ವಿಸ್ತರಣೆಯನ್ನು ಮುಂದೂಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ರಾಮನಗರ ಹಾಗೂ ಜಮಖಂಡಿ ಉಪಚುನಾವಣೆ ನೆಪವೊಡ್ಡಿ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆ ಇದೆ.

ರಾಜ್ಯ ಸಚಿವ ಸಂಪುಟ ಸೇರುವರ್ಯಾರು? ಇಲ್ಲಿದೆ ಸಂಭವನೀಯರ ಪಟ್ಟಿ

ಇಷ್ಟೇ ಅಲ್ಲದೇ ಉಪಚುನಾವಣೆ ಮುಗಿಯುವುದರೊಳಗೆ ಬೆಳಗಾವಿ ಅಧಿವೇಶನ ಎದುರಾಗಲಿದೆ. ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡಿದರೆ ಅಸಮಾಧಾನಿತರು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಾಧ್ಯತೆಗಳಿವೆ ಎಂದು ನಾಯಕರು ಅರಿತುಕೊಂಡಿದ್ದಾರೆ.

ಹೀಗಾಗಿ ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮುಂದೂಡುವ ಎಲ್ಲಾ ಸಾಧ್ಯತೆಗಳಿವೆ. ಇದ್ರಿಂದ ಸಚಿವ ಸ್ಥಾನಕ್ಕೆ ಜಾತಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದವರಿಗೆ ಭಾರೀ ನಿರಾಸೆಯಾಗಿದೆ.