ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಡಿಸೆಂಬರ್ 22ನ್ನು ಫಿಕ್ಸ್ ಮಾಡಲಾಗಿತ್ತು. ಆದರೆ ಮಾಹಿತಿಗಳ ಪ್ರಕಾರ ಸಂಪುಟ ವಿಸ್ತರಣೆ ದಿನಾಂಕ ಮತ್ತೆ ಮುಂದೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾದರೆ ಹೀಗಾಗಲು ಕಾರಣ ಏನು?
ಬೆಳಗಾವಿ[ಡಿ. 20] ಡಿಸೆಂಬರ್ 22 ರ ಬದಲು ಎರಡರಿಂದ ಮೂರು ದಿನ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. 22 ರಂದು ಸಂಪುಟ ವಿಸ್ತರಣೆ ಆಗದಿದ್ದರೂ ಪ್ರಮಾಣ ವಚನದ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಸಚಿವರ ಆಯ್ಕೆ ಸಂಬಂಧ ದೆಹಲಿಗೆ ಕೈ ನಾಯಕರು ತೆರಳಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿರುವ ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಸಿದ್ದರಾಮಯ್ಯ ಸಚಿವರ ಆಯ್ಕೆ ಸಂಬಂಧ ಕೆ.ಸಿ ವೇಣುಗೋಪಾಲ್ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಪಾಲಿಗಿರೋದು 6, ಸಂಪುಟಕ್ಕೆ ಯಾರ್ಯಾರು? ಫೈನಲ್ ಲಿಸ್ಟ್
ಕಾಂಗ್ರೆಸ್‌ಗೆ ಮೀಸಲಿರುವ 6 ಸಚಿವ ಸ್ಥಾನಕ್ಕೆ ಒಂದು ಡಜನ್‌ಗಿಂತಲೂ ಅಧಿಕ ಮಂದಿ ಆಕಾಂಕ್ಷಿಗಳಿದ್ದಾರೆ. ಜಾತಿ ವಾರು ಲೆಕ್ಕಾಚಾರ, ಪ್ರದೇಶವಾರು ಲೆಕ್ಕಾಚಾರ ಎಲ್ಲವನ್ನು ತಾಳೆ ಹಾಕಿ ಮಂತ್ರಿಗಿರಿ ಹಂಚಿಕೆ ಮಾಡಲಾಗುತ್ತದೆ. ಬೆಳಗಾವಿ ಅಧಿವೇಶನ ಸಸೂತ್ರವಾಗಿ ನಡೆಯಲು ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು ಎಂಬ ಮಾತು ಇದೆ.
