ಕಾಂಗ್ರೆಸ್ ಅತೃಪ್ತರ ಬಣಕ್ಕೆ ಆಂಜನೇಯ ಬಲ

First Published 13, Jun 2018, 5:17 PM IST
Karnataka Cabinet Expansion: Former Minister H Anjaneya meets M. B. Patil
Highlights

ಸಚಿವ ಸಂಪುಟದಲ್ಲಿ ಎಡಗೈ ಸಮುದಾಯಕ್ಕೆ ಸ್ಥಾನ ಸಿಗದಿರುವ ಕಾರಣ ಅತೃಪ್ತ ಶಾಸಕರನ್ನು ಮಾಜಿ ಸಚಿವ ಎಚ್. ಆಂಜನೇಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅತೃಪ್ತ ಶಾಸಕ ಎಚ್.ಕೆ. ಪಾಟೀಲ್ ರನ್ನು ಮೊದಲಿಗೆ ಭೇಟಿ ಮಾಡಿದ ನಂತರ  ನಂತರ ಕಾಂಗ್ರೆಸ್ ಅತೃಪ್ತ ಬಣದ ನಾಯಕ ಎಂ.ಬಿ.ಪಾಟೀಲ್ ರನ್ನು ಭೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ.

ಬೆಂಗಳೂರು ಜೂನ್ 13:  ಸಚಿವ ಸಂಪುಟದಲ್ಲಿ ಎಡಗೈ ಸಮುದಾಯಕ್ಕೆ ಸ್ಥಾನ ಸಿಗದಿರುವ ಕಾರಣ ಅತೃಪ್ತ ಶಾಸಕರನ್ನು ಮಾಜಿ ಸಚಿವ ಎಚ್. ಆಂಜನೇಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಅತೃಪ್ತ ಶಾಸಕ ಎಚ್.ಕೆ. ಪಾಟೀಲ್ ರನ್ನು ಮೊದಲಿಗೆ ಭೇಟಿ ಮಾಡಿದ ನಂತರ  ನಂತರ ಕಾಂಗ್ರೆಸ್ ಅತೃಪ್ತ ಬಣದ ನಾಯಕ ಎಂ.ಬಿ.ಪಾಟೀಲ್ ರನ್ನು ಭೇಟಿ ಮಾಡಿದರು.  ಎಡಗೈ ಸಮುದಾಯದ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಗೆ ಸಚಿವ ಸಂಪುಟ ಸ್ಥಾನ ಸಿಗಲು ಏನು ಮಾಡಬೇಕು ಎಂಬ ವಿಚಾರ ಭೇಟಿಯಲ್ಲಿ ಚರ್ಚೆಯಾಯಿತು.

ರೂಪಾ ಶಶಿಧರ್ ಗೆ ಸಚಿವ ಸ್ಥಾನ ಜೊತೆಗೆ ಉಳಿದ ಅತೃಪ್ತರಿಗೆ ಸಚಿವ ಸ್ಥಾನ ಪಡೆದುಕೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು. ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆಯಾಗುವಾಗ ಎಷ್ಟು ಸಚಿವ ಸ್ಥಾನ ಪಡೆದುಕೊಳ್ಳಬೇಕು? ಮುಂದೆ ಯಾವ ಹೆಜ್ಜೆ ಇಡಬಹುದು? ಎಂಬುದನ್ನು ಉಭಯ ನಾಯಕರು ಪರಾಮರ್ಶೆ ಮಾಡಿದರು. ಅತೃಪ್ತ ನಾಯಕರ ಬಣದೊಂದಿಗೆ ನಾವಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಆಂಜನೇಯ ಸ್ಪಷ್ಟಪಡಿಸಿದರು.

loader