Asianet Suvarna News Asianet Suvarna News

ರಂಗೇರಿದ ಉಪಚುನಾವಣೆ: ನಾಮಪತ್ರ ಸಲ್ಲಿಸಲು ಅರ್ಹರು, ಕ್ಷೇತ್ರದತ್ತ ಅನರ್ಹರು

ಸುಪ್ರೀಂ ಕೋರ್ಟ್ ತೀರ್ಪು ಎದುರುನೋಡುತ್ತಿರುವ  ಅನರ್ಹ ಶಾಸಕರ ಬಗ್ಗೆ ಕೇಂದ್ರ ಚುನಾವಣೆ ಆಯೋಗ ಮೃದು ಧೋರಣೆ ತಾಳಿದಂತಿದೆ.   ಕೋರ್ಟ್ ನಲ್ಲಿ ಚುನಾವಣಾ ಆಯೋಗದ ಪರ ವಕೀಲರ ಹೇಳಿಕೆ ಅನರ್ಹ ಶಾಸಕರಿಗೆ  ಮಿನಿ ಸಮರದಲ್ಲಿ ಉಸಿರಾಡೋಕೆ ಅವಕಾಶ ಸಿಕ್ಕಂತ್ತಾಗಿದ್ದು, ಮೂಲಗಳ ಪ್ರಕಾರ ನಾಮಪತ್ರ ಸಲ್ಲಿಸಲು ಅನರ್ಹರು ಅರ್ಹರು.

Karnataka By Poll:  EC reports disqualified MLAs  Eligible To file nomination
Author
Bengaluru, First Published Sep 23, 2019, 8:40 PM IST

ನವದೆಹಲಿ/ಬೆಂಗಳೂರು, [ಸೆ.23]:  ಕೇಸರಿ ಆಡಳಿತ ರಚನೆಗೆ ಮುನ್ನುಡಿ ಬರೆದಿದ್ದ, ಅನರ್ಹ ಶಾಸಕರ ಭವಿಷ್ಯ ಇನ್ನೂ ಅಡಕತ್ತರಿಯಲ್ಲೇ ಸಿಲುಕಿದೆ. ಅನರ್ಹತೆ ಪ್ರಶ್ನಿಸಿ ನ್ಯಾಯಾಕ್ಕಾಗಿ ಕದ ತಟ್ಟಿದ ಅನರ್ಹರ ಅರ್ಜಿ ಇಂದು [ಸೋಮವಾರ] ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಂತು. 

ಆದ್ರೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ರಮಣ್ ನೇತೃತ್ವದ ತ್ರಿಸದಸ್ಯ ವಿಚಾರಣೆಯನ್ನ ಇದೇ 25ಕ್ಕೆ ಅಂದ್ರೆ ಬುಧವಾರಕ್ಕೆ ಮುಂದೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅನರ್ಹರಿ ಎದೆಯಲ್ಲಿ ಢವ-ಢವ ಶುರುವಾಗಿದೆ.

ಅನರ್ಹರ ಅರ್ಜಿ ವಿಚಾರಣೆ ಸೆ.25ಕ್ಕೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ!

ಅಚ್ಚರಿಗೆ ಕಾರಣವಾದ ಆಯೋಗದ ನಡೆ  
ಹೌದು...ಅನರ್ಹ ಶಾಸಕರ ಬಗ್ಗೆ ಕೇಂದ್ರ ಚುನಾವಣೆ ಆಯೋಗ ಮೃದು ಧೋರಣೆ ತಾಳಿದಂತಿದ್ದು, ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತೋ ಎನ್ನುವ ಆತಂಕದಲ್ಲಿದ್ದ ಅನರ್ಹರಿಗೆ ಕೋರ್ಟ್ ನಲ್ಲಿ ಚುನಾವಣಾ ಆಯೋಗದ ಪರ ವಕೀಲರ ಹೇಳಿಕೆ ಅನರ್ಹ ಶಾಸಕರು ಮಿನಿ ಸಮರದಲ್ಲಿ ಉಸಿರಾಡೋಕೆ ಅವಕಾಶ ಸಿಕ್ಕಂತ್ತಾಗಿದೆ.

ಮೊನ್ನೇ ಅಷ್ಟೇ ರಾಜ್ಯ ಚುನಾವಣೆ ಆಯೋಗಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಟಿಯಲ್ಲಿ, ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೆ ಅತ್ತ ಸುಪ್ರೀಂನಲ್ಲಿ ಇಂದು [ಸೋಮವಾರ] ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೈ ಎಲೆಕ್ಷನ್‌ಗೆ ಅನರ್ಹರು ಸ್ಪರ್ಧಿಸಲು ಅವಕಾಶ ಇದ್ಯಾ? ಇಲ್ಲ?: ಸಂಪೂರ್ಣ ಮಾಹಿತಿ

ಅನರ್ಹರ  ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಕಕ್ಷಿದಾರರನ್ನಾಗಿ ಮಾಡಿಯೇ ಇಲ್ಲ. ಸುಪ್ರೀಂ ಕೋರ್ಟ್ ಕೂಡ ಆಯೋಗಕ್ಕೆ ಯಾವುದೇ ನೋಟಿಸ್ ನೀಡಿಲ್ಲ. ಹೀಗಿದ್ದಾಗ್ಯೂ ಆಯೋಗ ಸ್ವಯಂ ಪ್ರೇರಿತವಾಗಿ ವಾದ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಈ ಬಗ್ಗೆ ಸಾರ್ವಜನಿಕರಲ್ಲಿ ಹಲವು  ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಾಮಪತ್ರ ಸಲ್ಲಿಸಲು ಅನರ್ಹ ಅರ್ಹರು
 ಕೇಂದ್ರ ಚುನಾವಣೆ ಆಯೋಗದ ಮೂಲಗಳ ಪ್ರಕಾರ ಉಪಚುನಾವಣೆಗೆ ಅನರ್ಹ ಶಾಸಕರು ನಾಮಪತ್ರ ಸಲ್ಲಿಸಬಹುದು. ಆದ್ರೆ ಆ ನಾಮಪತ್ರವನ್ನು ಚುನಾವಣಾಧಿಕಾರಿ ಅಂಗೀಕರಿಸಬೇಕೋ ಬೇಡವೋ ಎನ್ನುವುದನ್ನು ಸುಪ್ರೀಂ ಕೋರ್ಟ್ ತೀರ್ಮಾನ ಎಂದು ಆಯೋಗದ ಮೂಲಗಳಿಂದ ತಿಳಿದುಬಂದಿದೆ. ಇದರಿಂದ ಸದ್ಯಕ್ಕೆ ಅನರ್ಹ ಶಾಸಕರು ನಾಮಪತ್ರ ಸಲ್ಲಿಸಲು ಯಾವುದೇ ಅಡ್ಡಿ ಇಲ್ಲ. ಈ ಹಿನ್ನೆಲೆಯಲ್ಲಿ  ಎಲ್ಲಿ ಸುಪ್ರಿಂ ಕೋರ್ಟ್ ತೀರ್ಪು ನೀಡುವುದರೊಳಗೆ ನಾಮಪತ್ರ ಸಲ್ಲಿಸುವ ದಿನಾಂಕ ಮುಗಿದುಹೋಗುತ್ತೋ ಎನ್ನುವ ಭಯದಲ್ಲಿದ್ದ  ಅನರ್ಹರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ನಾಮಪತ್ರ ಸಲ್ಲಿಸಲು ಸಜ್ಜಾದ ಅನರ್ಹರು
ಕೋರ್ಟಿನಲ್ಲಿ ತಮ್ಮ ಪರವೇ ತೀರ್ಪು ಬರಬಹುದೆಂಬ ನಿರೀಕ್ಷೆ ಅನರ್ಹರದ್ದು. ಅದೇ ನಿರೀಕ್ಷೆಯಲ್ಲಿ ನಾಮಪತ್ರ ಸಲ್ಲಿಸಲಿಸಲು ಅನರ್ಹ ಶಾಸಕರು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೇ ತೀರ್ಪು ನಿಮ್ಮ ಪರ ಬರಲಿದೆ ನಾಮಪತ್ರ ಸಲ್ಲಿಸಿ ಎಂದು ಸಿಎಂ ಕೂಡ ಭರವಸೆ ನೀಡಿದ್ದಾರೆ. ಸಿಎಂ ಮಾತಿನ ಮೇಲೆ ವಿಶ್ವಾಸವಿಟ್ಟು ನಾಮಪತ್ರ ಸಲ್ಲಿಕೆಗೆ ಅನರ್ಹರು ಮುಂದಾಗಿದ್ದಾರೆ. ಹೀಗಾಗಿ ಅನರ್ಹರು ದೆಹಲಿಯಿಂದ  ಬೆಂಗಳೂರಿಗೆ ಆಗಮಿಸಿದ್ದಾರೆ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ 6) ಯಶವಂತಪುರ 7) ಅಥಣಿ 8) ಕಾಗವಾಡ 9) ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ.

ಮಹತ್ವದ ದಿನಾಂಕಗಳು
ನಾಮಪತ್ರ ಸಲ್ಲಿಕೆ ಅಧಿಸೂಚನೆ - ಸೆಪ್ಟೆಂಬರ್ 23
ನಾಮಪತ್ರ ಸಲ್ಲಿಕೆ ಅಂತ್ಯ - ಸೆಪ್ಟೆಂಬರ್ 30
ನಾಮಪತ್ರ ಪರಿಶೀಲನೆ - ಅಕ್ಟೋಬರ್ 1
ನಾಮಪತ್ರ ವಾಪಸ್: ಅಕ್ಟೋಬರ್.3
ಮತದಾನ ಅಕ್ಟೋಬರ್ 21
ಫಲಿತಾಂಶ ಅಕ್ಟೋಬರ್ 24

Follow Us:
Download App:
  • android
  • ios