ಹಾವೇರಿ(ಸೆ. 25) ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿದ್ದಾಜಿದ್ದಿನ ಹೋರಾಟಕ್ಕೆ ಕಣ ಸಿದ್ಧವಾಗುತ್ತಿದೆ.  ಮಾಜಿ ಶಾಸಕ ಯು.ಬಿ.ಬಣಕಾರ್ ಗೆ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಲು ಬೆಂಬಲಿಗರ ಆಗ್ರಹ ಕೇಳಿಬಂದಿದೆ.

ಟಿಕೆಟ್ ನೀಡಲು ಆಗ್ರಹಿಸಿ ಬಣಕಾರ್ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಯು.ಬಿ.ಬಣಕಾರ್ ಬೆಂಬಲಿಗರ ಮನವೊಲಿಕೆಗೆ ಯತ್ನ ನಡೆಸಿದರು ಪ್ರತಿಭಟನೆ ಹಿಂಪಡೆಯುವಂತೆ ಕಾರ್ಯಕರ್ತರಿಗೆ ಬಣಕಾರ್ ಮನವಿ ಮಾಡಿಕೊಂಡರು. ಆದರೆ  ಬಣಕಾರ್ ಮನವಿ ತಿರಸ್ಕರಿಸಿದ ಪ್ರತಿಭಟನಾಕಾರ ಬೆಂಬಲಿಗರು  ಇವತ್ತೇ ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸಿದರು. 

ರಾಜೀನಾಮೆ ಕೊಟ್ಟಿದ್ದಕ್ಕೆ ಮೂಲ ಕಾರಣ ಹೇಳಿದ ಅನರ್ಹ ಶಾಸಕ

ಹಿರೇಕೇರೂರು ಶಾಸಕ ಬಿಸಿ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬದಲಾದ ರಾಜಕಾರಣದ ವಾತಾವರಣದಲ್ಲಿ ಆಗ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಿದ್ದರು. ಚುನಾವಣಾ ಆಯೋಗ ಕರ್ನಾಟಕದ ಖಾಲಿ ಇರುವ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡಿದೆ. ಅದರಂತೆ ಹಿರೇಕೆರೂರಿಗೂ  ಚುನಾವಣೆ ನಡೆಯಲಿದೆ. ಆದರೆ ಈ ಬಾರಿ ಬಿಸಿ ಪಾಟೀಲ್ ಅಥವಾ ಅವರ ಕುಟುಂಬದವರು ಬಿಜೆಪಿಯಿಂದ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದ್ದು ಮೊದಲಿನಿಂದಲೂ ಬಿಜೆಪಿಯಲ್ಲೇ  ಇರುವ ಬಣಕಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಬೆಂಬಲಿಗರು ಆಗ್ರಹಿಸುತ್ತಿದ್ದಾರೆ.

'HDKಗೆ ಏನೋ ಒಂದು ಚಟ, ಅನರ್ಹಗೊಳಿಸಿದ್ದು ಸಿದ್ದರಾಮಯ್ಯ!'

ಮಸ್ಕಿ, ಆರ್‌ಆರ್‌ ನಗರಕ್ಕೆ ಏಕೆ ಬೈ ಎಲೆಕ್ಷನ್ ಇಲ್ಲ?
2018 ವಿಧಾನಸಭೆ ಚುನಾವಣೆ ವೇಳೆ ರಾಯಚೂರು ಜಿಲ್ಲೆ ಮಸ್ಕಿ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ [RR ನಗರ] ಕ್ಷೇತ್ರಗಳಲ್ಲಿ ಅಕ್ರಮ ಮತದಾನ ಮಾಡಿಸಲಾಗಿದೆ ಎನ್ನುವ ಆರೋಪ ಇದ್ದು, ಈ ಪ್ರಕರಣ ಹೈಕೋರ್ಟ್ ನಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡಿಲ್ಲ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ 6) ಯಶವಂತಪುರ 7) ಅಥಣಿ 8) ಕಾಗವಾಡ 9) ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ. 

ಮಹತ್ವದ ದಿನಾಂಕಗಳು
ನಾಮಪತ್ರ ಸಲ್ಲಿಕೆ ಅಧಿಸೂಚನೆ - ಸೆಪ್ಟೆಂಬರ್ 23
ನಾಮಪತ್ರ ಸಲ್ಲಿಕೆ ಅಂತ್ಯ - ಸೆಪ್ಟೆಂಬರ್ 30
ನಾಮಪತ್ರ ಪರಿಶೀಲನೆ - ಅಕ್ಟೋಬರ್ 1
ನಾಮಪತ್ರ ವಾಪಸ್: ಅಕ್ಟೋಬರ್.3
ಮತದಾನ ಅಕ್ಟೋಬರ್ 21
ಫಲಿತಾಂಶ ಅಕ್ಟೋಬರ್ 24