ಬಿಜೆಪಿ ದೂರು ಆಧರಿಸಿ ರಾಮನಗರ ಉಪಚುನಾವಣೆ ರದ್ದು?
ನಿಗದಿಯಂತೆ ರಾಮನಗರ ಉಪಚುನಾವಣೆ ಶನಿವಾರ ನವೆಂನಬರ್ 3 ರಂದು ನಡೆಯಲೇಬೇಕು. ಆದರೆ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದರಿಂದ ಚುನಾವಣೆಯೇ ರದ್ದಾಗುತ್ತದೆಯೇ? ಹೀಗೊಂದು ಪ್ರಶ್ನೆ ಮೂಡಿದೆ.
ಬೆಂಗಳೂರು[ನ.02] ರಾಮನಗರ ಉಪಚುನಾವಣೆ ರದ್ದಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದರಿಂದ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಈ ದೂರನ್ನು ಆಧರಿಸಿ ದೆಹಲಿ ಚುನಾವಣಾ ಆಯೋಗದಲ್ಲಿ ಸಭೆ ನಡೆಯುತ್ತಿದೆ. ಚುನಾವಣಾ ಆಯೋಗದ ಸೂಚನೆಗೆ ರಾಜ್ಯ ಚುನಾವಣಾ ಆಯೋಗ ಸಹ ಕಾದು ಕುಳಿತಿದೆ.ಯಾವುದೇ ಕ್ಷಣದಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆಇದೆ.
ರಾಮನಗರದ ಆಪರೇಶನ್‌ಗೆ ರಿಯಲ್ ಕಾರಣಕರ್ತ ಯಾರು?
ಹಿಂದೆ ಸಹ ರಾಜ್ಯಸಭಾ ಚುನಾಣೆ ವೇಳೆ ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿದ್ದ ವೇಳೆ ಫಲಿತಾಂಶ ಪ್ರಕಟಕ್ಕೆ ಮುಖ್ಯ ಚುನಾವಣಾ ಆಯೋಗದ ಸಲಹೆ ಕೇಳಲಾಗಿತ್ತು.