Published : Feb 16 2018, 02:00 PM IST| Updated : Apr 11 2018, 12:51 PM IST
Share this Article
FB
TW
Linkdin
Whatsapp
ಪ್ರಸಕ್ತ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಕಂದಾಯ ಇಲಾಖೆಗೆ ಬಜೆಟ್ನಲ್ಲಿ 6642 ಕೋಟಿ ಅನುದಾನ ನೀಡಿದ್ದಾರೆ. ಇಲ್ಲಿದೆ ಬಜೆಟ್ ಹೈಲೈಟ್ಸ್:
ಕಂದಾಯ ಇಲಾಖೆಗೆ ಬಜೆಟ್ನಲ್ಲಿ 6642 ಕೋಟಿ ಅನುದಾನ
ವಾಸ ಪ್ರಮಾಣ ಪತ್ರಗಳನ್ನು ತಕ್ಷಣವೇ ನೀಡಲು 'ಈ ಕ್ಷಣ' ಯೋಜನೆ
ಭೂ ಮಾಪನಾ ಇಲಾಖೆ ವತಿಯಿಂದ ಐದು ಮೊಬೈಲ್ ಆ್ಯಪ್ ಗಳ ಅಭಿವೃದ್ಧಿ
ಮೂರು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಲ್ಯಾಂಡ್ ಟೈಟಲಿಂಗ್ ಯೋಜನೆ
ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ
2500 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗುವುದು
ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಗಳ ಪಿಂಚಣಿ ಮೊತ್ತ 500 ರಿಂದ 600ಕ್ಕೆ ಏರಿಕೆ
ಇದರಿಂದ 48 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು 576 ಕೋಟಿ ವೆಚ್ಚ
ರುದ್ರಭೂಮಿಗಳಿಗೆ ಜಮೀನು ಖರೀದಿ ಮಾಡಲು 10 ಕೋಟಿ
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಾಫಿ ಬೆಳೆದಿರುವವರಿಗೆ 10 ಎಕರೆವರೆಗೆ ಗುತ್ತಿಗೆ ನೀಡಲು ನಿಯಮ
ಕಾವೇರಿ ತಂತ್ರಾಂಶವನ್ನು ಬಿಬಿಎಂಪಿಯ ಜಿಐಎಸ್ ಡಾಟಾ ಬೇಸ್ ಜೊತೆ ಸಂಯೋಜನೆಗೆ 3 ಕೋಟಿ
ಹವಾಮಾನ ಮುನ್ಸೂಚನೆ ಮತ್ತು ಸಿಡಿಲು ಮುನ್ನೆಚ್ಚರಿಕೆ ನೀಡಲು ಮೊಬೈಲ್ ಆ್ಯಪ್ ಅಭಿವೃದ್ಧಿ
ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಶನ ಮಾಡಲು 20 ಕೋಟಿ
ತಿರುಮಲದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.