Asianet Suvarna News Asianet Suvarna News

'ವೆಂಕ ನಾಣಿ ಸೀನು ಅಂತಾ ಜೆಡಿಎಸ್‌ನಲ್ಲಿರೋದು 3 ಜನ’

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ  ಎಚ್‌.ಡಿ. ದೇವೇಗೌಡರಿಗೆ  ಬಿಜೆಪಿ ರಾಜ್ಯಾಧ್ಯಕ್ಚ ಬಿ. ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ವೆಂಕ ನಾಣಿ ಸೀನು ಅಂತಾ ನೀವಿರೋದೇ 3 ಜನ. ನೀವು ಯಾರ್ರೀ ಬಿಜೆಪಿ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಿಸೋಕೆ? ಎಂದು ವ್ಯಂಗ್ಯದ ಪ್ರಶ್ನೆ ಎಸೆದಿದ್ದಾರೆ.

Karnataka BJP President BS yeddyurappa slams JDS
Author
Bengaluru, First Published Oct 25, 2018, 5:11 PM IST
  • Facebook
  • Twitter
  • Whatsapp

ಬೆಂಗಳೂರು[ಅ.25]  ರಾಜ್ಯದಲ್ಲಿ ಬಿಜೆಪಿ ಭದ್ರವಾಗಿದೆ. ಹೆಚ್ಚು ಲೋಕಸಭೆ ಸ್ಥಾನಗಳನ್ನ ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿ ಮಾಡುತ್ತೇವೆ. ಯಡಿಯೂರಪ್ಪ ಸಿಎಂ ಆಗಬಾರದು ಅಂತಾ 37 ಸ್ಥಾನ ಪಡೆದು ಕಾಂಗ್ರೆಸ್ ಜೊತೆ ಕೈಜೊಡಿಸಿ ಸರ್ಕಾರ ನಡೆಸ್ತಿದ್ದೀರಾ?  ನೀವು ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಿಸೋಕೆ ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಶ್ರೀರಾಮುಲು ಅವರನ್ನು 420 ಎಂದು ಕರೆದಿದ್ದರೆ. ತುಂಬಾ ಹಗುರವಾಗಿ ಮಾತನಾಡುದ್ದಾರೆ. ನವೆಂಬರ್ 6 ರಂದು ಫಲಿತಾಂಶ ಬಂದ ಬಳಿಕ ಅವರಿಗೆ ಉತ್ತರ ಕೊಡುತ್ತೇನೆ ಎಂದು ಹೇಳಿದರು. 

ಮೈತ್ರಿ VS ಬಿಜೆಪಿ ; 5 ಕ್ಷೇತ್ರದ ಅಖಾಡದಲ್ಲಿ ಯಾರೆಲ್ಲ ಇದ್ದಾರೆ?

ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಲೋಕಸಭಾ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ಸಿದ್ಧವಾಗಿದೆ. ಹಾಗಾದರೆ ಯಾವೆಲ್ಲ ಘಟಾನುಘಟಿಗಳು ಅಖಾಡಲ್ಲಿದ್ದಾರೆ. ಸಮರ, ವಾಕ್ಸಮರ, ಸೆಂಟಿಮೆಂಟ್, ಜಾತಿ ಅಸ್ತ್ರ, ಅಪ್ಪನ ಸೇಡು, ಅಕ್ಕನ ಸೇಡು, ಮನೆ ಮಗ, ಮನೆ ಮಗಳು, ಸ್ಥಳೀಯ ಅಡ್ರೆಸ್ ಇಲ್ಲ... ಹೀಗೆ ಸಾಕಷ್ಟು ಬೇಕಿರದ, ಬೇಕಾಗದ ವಿಚಾರಗಳು ಚುನಾವಣಾ ಅಖಾಡದಲ್ಲಿ ಮೊಳಗುತ್ತಿದೆ. 3 ಲೋಕ ಸಭೆ ಮತ್ತು 2 ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಆಯಾ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ರಂಗೇರಿದೆ.

 

Follow Us:
Download App:
  • android
  • ios