ಬೆಂಗಳೂರು[ಜೂ. 05]  ರಾಜ್ಯದ ಜನತೆ ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನಾವು ಹೇಗೆ ಆ ಜವಾಬ್ದಾರಿ ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿಂತಿದೆ. 25 ಸಂಸದರು ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೂತನ ಸಂಸದರಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಸರ್ಕಾರ ಇದ್ದು ಸತ್ತಂತೆ ಆಗಿದೆ. ವಿಧಾನಸೌಧ ಖಾಲಿ ಆಗಿದೆ. ಗ್ರಾಮ ವಾಸ್ತವ್ಯ ಮಾಡ್ತೇನೆ ಅಂತ ಕುಮಾರಸ್ವಾಮಿ ಹೊಸ ನಾಟಕ ಶುರುಮಾಡಿದ್ದಾರೆ. ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮ ಹೇಗಿದೆಯೋ ಗೊತ್ತಿಲ್ಲ. ಈಗ ಶಾಲಾ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಭೀಕರ ಬರಗಾಲ ಇದೆ, ಸಚಿವರು ಆ ಕ್ಷೇತ್ರಗಳಿಗೆ ಹೋಗ್ತಾ ಇಲ್ಲ ಎಂದು ಸರಕಾರ ಮತ್ತು ಕುಮಾರಸ್ವಾಮಿ ಮೇಲೆ ವಾಗ್ದಾಳಿ ಮಾಡಿದರು. 

ಬಿಜೆಪಿ ಅಭ್ಯರ್ಥಿಗಳು ಗೆದ್ದು ಬಂದ ಕಾರಣ ಹೇಳಿದ ಈಶ್ವರಪ್ಪ

ಜಿಂದಾಲ್ ಗೆ ಭೂಮಿ ನೀಡುವುದನ್ನು ಖಂಡಿಸುತ್ತೇನೆ. ಈ ಬಗ್ಗೆ ಹೋರಾಟ ಮಾಡುತ್ತೇವೆ. ಜಿಂದಾಲ್ ಗೆ ಲೀಸ್ ಗೆ ಬೇಕಾದರೆ ನೀಡಲಿ ಅದನ್ನು ಬಿಟ್ಟು ಮಾರಾಟ ಮಾಡಲು ಬಿಡಲ್ಲ ಎಂದು ಬಿಎಸ್ ವೈ ಗುಡುಗಿದರು.