ಬಿಜೆಪಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಹೇಗೆ ಗೆದ್ದು ಬಂದರು ಎಂಬುದನ್ನು ಬಿಜೆಪಿ ನಾಯಕ ಕೆಎಸ್  ಈಶ್ವರಪ್ಪ ವಿಶ್ಲೇಷಣೆ ಮಾಡಿದ್ದಾರೆ.

ಬೆಂಗಳೂರು(ಜೂ. 05) ನರೇಂದ್ರ ಮೋದಿ ಜೀವತಾವಧಿಯವರೆಗೂ ಪ್ರಧಾನಿ ಆಗಿಯೇ ಇರುತ್ತಾರೆ. ರಾಜ್ಯದಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಎಲ್ಲ ಎಂಪಿಗಳು ಅವರು ಮಾಡಿದ ಪುಣ್ಯವೋ, ಅವರ ಅಪ್ಪ- ಅಮ್ಮ ಮಾಡಿದ ಪುಣ್ಯವೋ ಬಿಜೆಪಿ ಕ್ಯಾಂಡಿಡೇಟ್ ಗಳಾಗಿ ಗೆದ್ದು ಬಂದರು. ರಾಜ್ಯದಲ್ಲಿ ಈ ಸರ್ಕಾರ ಇವತ್ತು ಇರುತ್ತೋ ಹೋಗುತ್ತೋ ಗೊತ್ತಿಲ್ಲ‌ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದರು.

ಜಮೀರ್ ಗೆ ಹೊಸ ಹೆಸರು ನಾಮಕರಣ ಮಾಡಿದ ಈಶ್ವರಪ್ಪ

ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ಬರಬಹುದು. ಯಾವಾಗಲೇ ವಿಧಾನಸಭೆ ಚುನಾವಣೆ ಎದುರಾದರೂ, ಬಿಜೆಪಿ ಗೆದ್ದು,ವಿಶೇಷ ಸಂಸ್ಕೃತಿ ಉಳಿಸುವ ಸರ್ಕಾರ ರಚನೆ ಮಾಡುವುದು ನಿಶ್ಚಿತ. ನಾವು ಯಾರು ನಿರೀಕ್ಷೆ ಮಾಡದ ಗೆಲುವು ನೀಡಿದ ಮತದಾರರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ ಎಂದರು.