ಬೆಂಗಳೂರು, (ಆ.05): ರಾಜ್ಯದಲ್ಲಿ‌ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಖತಂ ಆದ ಬೆನ್ನಲ್ಲೇ ಈಗ ಬಿಬಿಎಂಪಿ ಬಿಜೆಪಿ ಕಾರ್ಪೊರೇಟರ್ ಗಳಲ್ಲಿ ಉತ್ಸಾಹ ಗರಿಗೆದರಿದೆ.

ಕಾಂಗ್ರೆಸ್‌ನ ಹಾಲಿ‌ ಮೇಯರ್ ಗಂಗಾಬಿಕೆ ಅವಧಿ ಮುಂದಿನ ತಿಂಗಳು ಸೆಪ್ಟೆಂಬರ್ 28ಕ್ಕೆ ಕೊನೆಗೊಳಿದ್ದು, ಅದೇ ತಿಂಗಳಲ್ಲಿ ಹೊಸ ಮೇಯರ್ ಆಯ್ಕೆ ನಡೆಯಲಿದೆ. ಈ ಹಿನ್ನೆಯಲ್ಲಿ ರಾಜ್ಯ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ ರೀತಿಯಲ್ಲಿ ಬಿಬಿಎಂಪಿಯಲ್ಲೂ ಮೈತ್ರಿಯನ್ನು ಮುರಿಯಲು ಬಿಜೆಪಿ ರಣತಂತ್ರ ರೂಪಿಸಿದೆ.

BBMP ಬಜೆಟ್ ಅನುಷ್ಠಾನಕ್ಕೆ ಸಿಎಂ ತಡೆ: ಕಾರಣವೂ ಉಂಟು

101 ಸ್ಥಾನಗಳ ಗೆದ್ದರೂ ಕಳೆದ 4 ವರ್ಷಗಳಿಂದ ವಿರೋಧ ಪಕ್ಷದಲ್ಲಿ ಕೂತು ಬೇಸತ್ತಿರೋ ಬಿಬಿಎಂಪಿ ಬಿಜೆಪಿ ಸದಸ್ಯರು ಆಡಳಿತ ಚುಕ್ಕಾಣಿ ಹಿಡಿಯುವ ಹಂಬಲದಲ್ಲಿದೆ.

ದೋಸ್ತಿ ಸರ್ಕಾರ ಪತನಗೊಳ್ಳಲು ಸಾಥ್ ಕೊಟ್ಟ ಜೆಡಿಎಸ್‌ನಿಂದ ಅನರ್ಹಗೊಂದ ಶಾಸಕ ಗೋಪಾಲಯ್ಯ ಪತ್ನಿ ಕಾರ್ಪೊರೇಟರ್ ಹೇಮಲತಾ ಅವರು ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆ ಎನ್ನುವ ಮಾತುಳು ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ  ಜೆಡಿಎಸ್ ಕಾರ್ಪೊರೇಟ್ ಹೇಮಲತಾ ಅವರಿಗೆ ಬಿಜೆಪಿ ಮೇಯರ್ ಸ್ಥಾನದ ಗಿಫ್ಟ್ ನೀಡುತ್ತಾ ಎನ್ನುವ ಪ್ರಶ್ನೆಗಳ ಸಹ ಹುಟ್ಟಿಕೊಂಡಿವೆ. ಅನರ್ಹವಾಗಿದ್ದರಿಂದ ಸಚಿವ ಸ್ಥಾನದ ಬದಲು ತಮ್ಮ ಪತ್ನಿಗೆ‌ ಮೇಯರ್ ಪಟ್ಟಕ್ಕೆ ಗೋಪಾಲಯ್ಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಕಳೆದ ಬಾರಿ ಸಹ ಮೇಯರ್ ಪಟ್ಟಕ್ಕಾಗಿ ಬಾರಿ ಕಸರತ್ತು ನಡೆಸಿ ಕೈ ಚಲ್ಲಿದ್ದ ಬಿಜೆಪಿ, ಈಗ ತಮ್ಮದೇ ಸರ್ಕಾರ ಇರುವುದರಿಂದ ಏನಾದರೂ ಮಾಡಿ ಬಿಬಿಎಂಪಿಯನ್ನು ಸಹ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ.

ಮತ್ತೊಂದೆಡೆ ಬಿಜೆಪಿ ಕಾರ್ಪೊರೇಟರ್ ಪದ್ಮನಾಭ ರೆಡ್ಡಿ, ಮಂಜುನಾಥ್ ರಾಜು, ಎಲ್ ಶ್ರೀನಿವಾಸ್ ಸೇರಿದಂತೆ ಹಲವು ಸೀಮಿಯರ್ ಕಾರ್ಪೊರೇಟರ್ ಗಳು ಮೇಯರ್ ರೇಸ್ ನಲ್ಲಿ ಕಾಣಿಸಿಕೊಂಡಿದ್ದಾರೆ

ಒಟ್ಟಿನಲ್ಲಿ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿದೆ.