ಮುಂಬೈ (ಅ.12): ಮಹದಾಯಿ ವಿಚಾರದಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ನಾಯಕರು ರಾಜ್ಯದ ಸಮಸ್ಯೆ ವಿವರಿಸಿದ್ದು ಮಧ್ಯಸ್ಥಿಕೆ ವಹಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಪಡ್ನವಿಸ್ ಮುಂದಾಗಿದ್ದಾರೆ.
ಮುಂಬೈ (ಅ.12): ಮಹದಾಯಿ ವಿಚಾರದಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ನಾಯಕರು ರಾಜ್ಯದ ಸಮಸ್ಯೆ ವಿವರಿಸಿದ್ದು ಮಧ್ಯಸ್ಥಿಕೆ ವಹಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಪಡ್ನವಿಸ್ ಮುಂದಾಗಿದ್ದಾರೆ.
ನಮ್ಮ ನೀರಿನ ಹಕ್ಕು ಅಗತ್ಯತೆ ಬಗ್ಗೆ ಫಡ್ನವಿಸ್ಗೆ ಬಿಜೆಪಿ ತಂಡ ಸ್ಪಷ್ಟನೆ ನೀಡಿದ್ದು ರಾಜ್ಯದ ಸಮಸ್ಯೆಯನ್ನು ವಿಸ್ತೃತವಾಗಿ ವಿವರಿಸಿದೆ. ವಿವರಣೆಯನ್ನು ಆಲಿಸಿದ ಫಡ್ನವೀಸ್ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಚರ್ಚೆ ನಡೆಸಿದ್ದಾರೆ.
ಅದೇ ರೀತಿ ಅತ್ತ ಮಹಾರಾಷ್ಟ್ರದ ಬೇಡಿಕೆ ಬಗ್ಗೆ ವಿವರ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೇಡಿಕೆಗಳು ಒಂದೇ ರೀತಿ ಇವೆ. ಎಲ್ಲರಿಗೂ ಸಮಾಧಾನವಾಗುವಂತೆ ಮಹದಾಯಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಫಡ್ನವೀಸ್ ಭರವಸೆ ನೀಡಿದ್ದಾರೆ.