ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಆರೇ ತಿಂಗಳು ಆಯುಷ್ಯ
ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಗದ್ದುಗೆಗೆ ಏರಿದ್ದು, ಹೆಚ್ಚು ಆಯಸ್ಸು ಸರ್ಕಾರಕ್ಕೆ ಇಲ್ಲ ಎಂದು ಭವಿಷ್ಯ ನುಡಿಯಲಾಗಿದೆ.
ವಿಜಯಪುರ [ಜು.27]: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಏರಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಇದೇ ವೇಳೆ ಕೈ ನಾಯಕರು ಬಿಜೆಪಿ ಸರ್ಕಾರಕ್ಕೆ ಹೆಚ್ಚಿನ ಆಯಸ್ಸು ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಎಕ್ಪೈರಿ ಡೇಟ್ ಆರು ತಿಂಗಳು ಮಾತ್ರ. ಇನ್ನು 6 ತಿಂಗಳು, ವರ್ಷದ ಒಳಗೆ ಸರ್ಕಾರ ಪತನವಾಗಲಿದೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಯಡ್ಯೂರಪ್ಪ ಸರಕಾರಕ್ಕೂ 8 ತಿಂಗಳೇ ಆಯಸ್ಸು: ಜ್ಯೋತಿಷಿ ಭವಿಷ್ಯ
ಯಡಿಯೂರಪ್ಪ ರಾಜಕೀಯ ಜೀವನದ ಕಟ್ಟ ಕಡೆಯ ಹಂತದಲ್ಲಿದ್ದಾರೆ. ಅವರಿಗೆ ಇದು ಅನಿವಾರ್ಯವಾಗಿತ್ತು. ತಾಳ್ಮೆಯಿಂದ ಮುಂದೆ ಸಿಎಂ ಆಗುವ ವಿಶ್ವಾಸ ಅವರಲ್ಲಿರಲಿಲ್ಲ. ಇದು ಘನತೆ ಗೌರವ ತರುವಂತದ್ದಲ್ಲ. ಬಿ ಎಸ್ ವೈ ದುರಾಸೆಯಿಂದ ಸಿಎಂ ಆಗಿದ್ದಾರೆ ಎಂದು ವಾಕ್ ಪ್ರಹಾರ ನಡೆಸಿದರು.
ರಾಜ್ಯ ರಾಜಕೀಯದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ
ಅವರ ಪಕ್ಷದಲ್ಲಿರುವ ವಯಸ್ಸಿನ ಪರಿಮಿತಿಯಿಂದಾಗಿ ಈಗ ತರಾತುರಿಯಲ್ಲಿ ಸಿಎಂ ಆಗಿದ್ದಾರೆ. ಇಲ್ಲದಿದ್ದರೆ ಅವರನ್ನು ಬಿಜೆಪಿ ಮಾರ್ಗದರ್ಶನ ಸಮಿತಿ ಸೇರಬಹುದು ಎಂಬ ಆತಂಕ ಅವರಲ್ಲಿತ್ತು. ಈಗ ರಚನೆಯಾಗಿರುವ ಸರಕಾರವೇ ಅನೈತಿಕವಾಗಿದೆ. ಆರು ತಿಂಗಳಿಂದ ಒಂದು ವರ್ಷ ಈ ಸರಕಾರದ ಆಯುಷ್ಯವಿದೆ ಎಂದು ಪಾಟೀಲ್ ಆಕ್ರೋಶ ಹೊರಹಾಕಿದರು.
ಮನೆದೇವರ ದರ್ಶನವಿಲ್ಲದೆ ಯಡಿಯೂರಪ್ಪ ಪ್ರಮಾಣ!
ಮೈತ್ರಿ ಸರ್ಕಾರದ ಎಲ್ಲ ವರ್ಗಾವಣೆ ತಡೆ ಹಿಡಿದ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಕಾನೂನಾತ್ಮಕವಾಗಿ ಏನು ಮಾಡಲಿಕ್ಕೆ ಬರುತ್ತದೆಯೋ ಅದನ್ನ ಮಾಡಲಿ. ಈ ಸರ್ಕಾರ ರಚನೆ ಆಗಿರೋದೆ ಅನೈತಿಕ ಎಂದು
ವಿಜಯಪುರದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದರು.