ಒಂದೇ ಹೆಸರು, ಒಂದೇ ಜನ್ಮ ದಿನಾಂಕದಿಂದಾಗಿ ರಾಜ್ಯದ ಯುವಕನೊಬ್ಬ ಸೌದಿ ಅರೇಬಿಯಾದ ಕಾನೂನು ಜಂಜಾಟದಲ್ಲಿ ಸಿಲುಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ತುಮಕೂರು ಜಿಲ್ಲೆ ತುರುವೇಕೆರೆಯ ಸುಬ್ರಹ್ಮಣ್ಯನಗರದ ನಿವಾಸಿ ಟಿಂಬರ್ ಮರ್ಚೆಂಟ್ ಆಗಿರುವ ಅನ್ಸರ್ ಪುತ್ರ ನಯಾಜ್ ಅಹಮದ್(೪೧) ಸೌದಿಯಲ್ಲಿ ಬಂಧಿಯಾಗಿದ್ದಾರೆ. ನಯಾಜ್ ಹೆಸರಿನ ಬೆಂಗಳೂರು ಮೂಲದವನು ಎನ್ನಲಾದ ಯುವಕನೋರ್ವ ಸೌದಿಯಲ್ಲಿ ಅಪರಾಧ ಎಸಗಿ, ಪರಾರಿಯಾಗಿದ್ದು, ಇಬ್ಬರ ಹೆಸರು, ಹುಟ್ಟಿದ ದಿನಾಂಕ, ಪಾಸ್‌ಪೋರ್ಟ್ ನೋಂದಣಿ ಎಲ್ಲವೂ ಹೊಂದಾಣಿಕೆಯಾಗಿದೆ. ಇದು ತುರುವೇಕೆರೆ ಯುವಕ ನಯಾಜ್ ಅಹಮದ್‌ಗೆ ಈಗ ಮುಳುವಾಗಿದೆ.ತುರುವೇಕೆರೆ ಮೂಲದ ನಯಾಜ್‌ರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಸೌದಿ ವಿಮಾನ ನಿಲ್ದಾಣದ ತನಿಖಾಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ.
ತುರುವೇಕೆರೆ (ಮೇ.20): ಒಂದೇ ಹೆಸರು, ಒಂದೇ ಜನ್ಮ ದಿನಾಂಕದಿಂದಾಗಿ ರಾಜ್ಯದ ಯುವಕನೊಬ್ಬ ಸೌದಿ ಅರೇಬಿಯಾದ ಕಾನೂನು ಜಂಜಾಟದಲ್ಲಿ ಸಿಲುಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ತುರುವೇಕೆರೆಯ ಸುಬ್ರಹ್ಮಣ್ಯನಗರದ ನಿವಾಸಿ ಟಿಂಬರ್ ಮರ್ಚೆಂಟ್ ಆಗಿರುವ ಅನ್ಸರ್ ಪುತ್ರ ನಯಾಜ್ ಅಹಮದ್(೪೧) ಸೌದಿಯಲ್ಲಿ ಬಂಧಿಯಾಗಿದ್ದಾರೆ. ನಯಾಜ್ ಹೆಸರಿನ ಬೆಂಗಳೂರು ಮೂಲದವನು ಎನ್ನಲಾದ ಯುವಕನೋರ್ವ ಸೌದಿಯಲ್ಲಿ ಅಪರಾಧ ಎಸಗಿ, ಪರಾರಿಯಾಗಿದ್ದು, ಇಬ್ಬರ ಹೆಸರು, ಹುಟ್ಟಿದ ದಿನಾಂಕ, ಪಾಸ್ಪೋರ್ಟ್ ನೋಂದಣಿ ಎಲ್ಲವೂ ಹೊಂದಾಣಿಕೆಯಾಗಿದೆ. ಇದು ತುರುವೇಕೆರೆ ಯುವಕ ನಯಾಜ್ ಅಹಮದ್ಗೆ ಈಗ ಮುಳುವಾಗಿದೆ.
ತುರುವೇಕೆರೆ ಮೂಲದ ನಯಾಜ್ರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಸೌದಿ ವಿಮಾನ ನಿಲ್ದಾಣದ ತನಿಖಾಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ.
ಆಗಿದ್ದೇನು?:
ಸೌದಿ ಅರೇಬಿಯಾದ ಉಮ್ರಾ ಯಾತ್ರೆಗೆಂದು ನಯಾಜ್, ಆದಿಲ್ ಪಾಷಾ ಹಾಗೂ ತುಮಕೂರು ನಗರದ ೩೩ ಮಂದಿ ತಂಡ ಏಪ್ರಿಲ್ ೨೦ರ ಬೆಳಗಿನ ಜಾವ ಬೆಂಗಳೂರಿನಿಂದ ಸೌದಿ ಅರೇಬಿಯಾ ಏರ್ಲೈನ್ಸ್ ವಿಮಾನದಲ್ಲಿ ಸೌದಿಗೆ ಪ್ರಯಾಣ ಬೆಳೆಸಿತ್ತು. ಜೆದ್ದಾ ನಿಲ್ದಾಣದಲ್ಲಿ ವಿಮಾನ ಇಳಿದ ಎಲ್ಲರ ದಾಖಲಾತಿಗಳನ್ನು ಪರಿಶೀಲಿಸಿದ ಅಲ್ಲಿನ ವಿಮಾನ ತನಿಖಾಧಿಕಾರಿಗಳು, ಉಳಿದವರನ್ನು ಯಾತ್ರೆಗೆ ಕಳುಹಿಸಿ ನಯಾಜ್ರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದರು.
ಹೆಸರು, ಜನ್ಮ ದಿನಾಂಕ ತಂದ ಪೀಕಲಾಟ:
1976 ರ ಜೂನ್ 1 ರಂದು ಹುಟ್ಟಿದ್ದ ನಯಾಜ್ ಎಂಬ ಯುವಕ ಸೌದಿಯಲ್ಲಿ ಅಪರಾಧವೆಸಗಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂಬ ಸಂದೇಶವನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನೀಡಲಾಗಿತ್ತು. ಕಾಕತಾಳೀಯ ಎಂಬಂತೆ ತುರುವೇಕೆರೆ ಯುವಕನ ಹೆಸರೂ ನಯಾಜ್ ಅಹಮದ್, ಈತನ ಹುಟ್ಟಿದ ದಿನಾಂಕವೂ ೧.೬.೧೯೭೬ ಆಗಿತ್ತು. ಆ ಯುವಕ ಬೆಂಗಳೂರಿನ ಪಾಸ್ಪೋರ್ಟ್ ಕಚೇರಿಯಲ್ಲಿಯೇ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದ. ತುರುವೇಕೆರೆಯ ನಯಾಜ್ ಕೂಡ ಬೆಂಗಳೂರಿನಲ್ಲಿಯೇ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದರು. ಅಪರಾಧ ಎಸಗಿ ಪರಾರಿಯಾಗಿರುವ ಯುವಕನೇ ಇವನು ಎಂದು ತನಿಖಾಧಿಕಾರಿಗಳು ತುರುವೇಕೆರೆ ನಯಾಜ್ ಅಹಮದ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಧಿಕಾರಿಗಳು ನಯಾಜ್ ಅಹಮದ್ನನ್ನು ವಿಚಾರಣೆ ನಡೆಸಿ, ಕಳುಹಿಸುವ ಭರವಸೆ ನೀಡಿದ್ದರು. ಇಂದಿಗೆ ೧ ತಿಂಗಳಾದರೂ ಸಹ ನಯಾಜ್ ಅಹಮದ್ರನ್ನು ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಕುಟುಂಬ ಕಂಗಾಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ರನ್ನು ಖುದ್ದಾಗಿ ಭೇಟಿ ಮಾಡಿ, ತಮ್ಮ ಮಗನನ್ನು ಬಿಡಿಸಿಕೊಡಬೇಕು ಎಂದು ವಿನಂತಿಸಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದಾರೆ.
ಕಂಗಾಲಾದ ಕುಟುಂಬ: ಕೇಂದ್ರಕ್ಕೆ ಮೊರೆ
ನಯಾಜ್ ಅಹಮದ್ ತಂದೆ ಅನ್ಸರ್, ತಾಯಿ ಶಂಶಾದ್ ಬೇಗ್, ಸಹೋದರರರಾದ ಫಯಾಜ್ ಅಹಮದ್, ರಿಯಾಜ್ ಅಹಮದ್ ಮತ್ತು ಇಮ್ರಾನ್ ಅಹಮದ್ (ಭಾರತೀಯ ಮಿಲಿಟರಿ ಸೇವೆಯಲ್ಲಿದ್ದಾರೆ), ಪತ್ನಿ ಅಫಿಯಾಬಾನು, ಮಗ ಅಯಾಜ್, ಮಗಳು ಅಂರೀನ್ ಕಂಗಾಲಾಗಿದ್ದಾರೆ.
ಸೌದಿ ಅರೇಬಿಯಾದಲ್ಲಿ ಅಪರಾಧ ಮಾಡಿ, ಪರಾರಿಯಾಗಿರುವ ಯುವಕ ನಯಾಜ್ ಅಹಮದ್ ಬೆಂಗಳೂರಿನ ನಿವಾಸಿ. ಆತನ ತಂದೆ ಹೆಸರು ಷಫೀದ್ ಅಹಮದ್. ಈ ಕುರಿತು ನಯಾಜ್ ಅಹಮದ್ ಸಂಬಂಧಿಕರು ಭಾರತೀಯ ರಾಯಭಾರಿ ಕಚೇರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯಿಂದಲೂ ಎರಡೂ ವಿಳಾಸದಲ್ಲಿರುವವರು ಬೇರೆ ವ್ಯಕ್ತಿಗಳು, ಅಲ್ಲದೇ, ತುರುವೇಕೆರೆಯ ನಯಾಜ್ ಅಹಮದ್ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂಬುದು ತನಿಖೆಯಿಂದ ಧೃಢಪಟ್ಟಿದೆ ಎಂದು ವಿವರ ನೀಡಿದ್ದಾರೆ. ಆದರೂ ಸಹ ಇನ್ನೂ ನಯಾಜ್ ಅಹಮದ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ನಯಾಜ್ ಅಹಮದ್ ಸಹೋದರ ಫಯಾಜ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ನಯಾಜ್ ಅಹಮದ್ನ ಇರುವಿಕೆಯನ್ನು ಕಾಣಲು ಕಾತರರಾಗಿರುವ ಕುಟುಂಬದ ಸದಸ್ಯರು ಎಲ್ಲ ಜನಪ್ರತಿನಿಧಿಗಳನ್ನು ಭೇಟಿ ಮಾಡಿ, ಸಹಾಯಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸಮರ್ಪಕವಾಗಿರುವ ದಾಖಲೆ ಹೊಂದಿದ್ದರೂ ಸಹ ಅಮಾಯಕನೊಬ್ಬನನ್ನು ಬಂಧಿಸಿರುವ ಸೌದಿ ಅರೇಬಿಯಾದ ಪೊಲೀಸರ ಕ್ರಮವನ್ನು ಖಂಡನೀಯ. ಅಲ್ಲಿಯ ಪೊಲೀಸರಿಗೆ ಸೂಕ್ತ ಮಾಹಿತಿ ನೀಡಿದರೂ ಸಹ ನಯಾಜ್ ಅಹಮದ್ನನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಪೊಲೀಸರ ಈ ವರ್ತನೆ ಅನುಮಾನಕ್ಕೆಡೆ ಮಾಡಿಕೊಡುತ್ತಿದೆ. ಅಮಾಯಕರಿಗೆ ಈ ರೀತಿ ವಿನಾಕಾರಣ ತೊಂದರೆ ನೀಡಿದರೆ ಮುಂಬರುವ ದಿನಗಳಲ್ಲಿ ಯಾತ್ರೆ ಮಾಡುವವರ ಗತಿ ಏನು?
-ಮುತುವಲ್ಲಿ ಅಸ್ಲಾಂಪಾಷಾ ಜಾಮಿಯಾ ಮಸೀದಿ ತುರುವೇಕೆರೆ
