ಈ ಕ್ಷೇತ್ರದಲ್ಲಿ ನಡೆಯಲಿದೆ ಬಿಜೆಪಿ ಮಾವ - ಕಾಂಗ್ರೆಸ್ ಅಳಿಯನ ನಡುವೆ ಹಣಾಹಣಿ

First Published 26, Feb 2018, 12:45 PM IST
Karnataka Assembly Election News
Highlights

ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಹಾಲಿ ಕಾಂಗ್ರೆಸ್ ಶಾಸಕ. ಅವರು ಮತ್ತೊಮ್ಮೆ ಸ್ಪರ್ಧಿಸುವುದು ನಿಶ್ಚಿತ. ಬಿಜೆಪಿಯಿಂದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಎದುರಾಳಿಯಾಗಲಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು.

ದಾವಣಗೆರೆ : ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಹಾಲಿ ಕಾಂಗ್ರೆಸ್ ಶಾಸಕ. ಅವರು ಮತ್ತೊಮ್ಮೆ ಸ್ಪರ್ಧಿಸುವುದು ನಿಶ್ಚಿತ. ಬಿಜೆಪಿಯಿಂದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಎದುರಾಳಿಯಾಗಲಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು.

ಸಂಬಂಧದಲ್ಲಿ ರವೀಂದ್ರನಾಥಗೆ ಮಲ್ಲಿಕಾರ್ಜುನ ಅಳಿಯ ಆಗಬೇಕು. ಚುನಾವಣೆಯಲ್ಲಿ ಈ ಇಬ್ಬರ ನಡುವೆಯೇ ಹಣಾಹಣಿ ನಿಶ್ಚಿತ.

ಜೆಡಿಎಸ್‌ನಿಂದ ನಾಯಕ ಜನಾಂಗದ ಟಿ. ಗಣೇಶ ದಾಸಕರಿಯಪ್ಪ ಆಕಾಂಕ್ಷಿಯಾಗಿದ್ದಾರೆ. ನಗರ ಪ್ರದೇಶದಲ್ಲಿ ಮಲ್ಲಿಕಾರ್ಜುನ, ಗ್ರಾಮೀಣ ಭಾಗದಲ್ಲಿ ರವೀಂದ್ರನಾಥ ಪ್ರಾಬಲ್ಯ ಹೊಂದಿದ್ದಾರೆ. 2008ರಲ್ಲಿ ಕಾಂಗ್ರೆಸ್ಸಿನ ಗೊಂದಲದಿಂದಾಗಿ ಬಿಜೆಪಿಯ ರವೀಂದ್ರನಾಥ ಸುಲಭವಾಗಿ ಗೆದ್ದಿದ್ದರು. 2013ರಲ್ಲಿ ಬಿಜೆಪಿ ವಿಭಜನೆಯಿಂದಾಗಿ ಮಲ್ಲಿಕಾರ್ಜುನ ಭಾರಿ ಅಂತರದಲ್ಲಿ ಜಯ ಸಾಧಿಸಿದ್ದರು.

loader