ಗಡಿಯಾರದ ಗಂಟೆಗೆ ಚುನಾವಣೆಯ ಬಿಸಿ ತಟ್ಟಿದೆ. ವಿಚಿತ್ರ ಎನ್ನಿಸಿದರೂ ಇದು ನಿಜ. ಕೊಪ್ಪಳ ಕ್ಷೇತ್ರದ ಶಾಸಕ ಶಾಸಕ ರಾಘವೇಂದ್ರ ಹಿಟ್ನಾಳ್‌, ಗಂಟೆ ಹೊಡೆಯುವ ಈ ಗಡಿಯಾರದ ಅಳವಡಿಕೆಗೆ ಕಾರಣೀಕರ್ತರು. ಹೀಗಾಗಿ ಚುನಾವಣಾ ಮುಗಿಯುವವರಿಗೆ ಗಂಟೆ ಗಡಿಯಾರ ನಿಲ್ಲಿಸಬೇಕೆಂದು ಚುನಾವಣಾ ಆಯೋಗಕ್ಕೆ ಬುಧವಾರ ಮನವಿ ಸಲ್ಲಿಸಲಾಗಿದೆ.

ಕೊಪ್ಪಳ : ಗಡಿಯಾರದ ಗಂಟೆಗೆ ಚುನಾವಣೆಯ ಬಿಸಿ ತಟ್ಟಿದೆ. ವಿಚಿತ್ರ ಎನ್ನಿಸಿದರೂ ಇದು ನಿಜ. ಕೊಪ್ಪಳ ಕ್ಷೇತ್ರದ ಶಾಸಕ ಶಾಸಕ ರಾಘವೇಂದ್ರ ಹಿಟ್ನಾಳ್‌, ಗಂಟೆ ಹೊಡೆಯುವ ಈ ಗಡಿಯಾರದ ಅಳವಡಿಕೆಗೆ ಕಾರಣೀಕರ್ತರು. ಹೀಗಾಗಿ ಚುನಾವಣಾ ಮುಗಿಯುವವರಿಗೆ ಗಂಟೆ ಗಡಿಯಾರ ನಿಲ್ಲಿಸಬೇಕೆಂದು ಚುನಾವಣಾ ಆಯೋಗಕ್ಕೆ ಬುಧವಾರ ಮನವಿ ಸಲ್ಲಿಸಲಾಗಿದೆ.

ನಗರದ ಮುಖ್ಯ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಹಿಟ್ನಾಳ್‌ ಅವರ ಕೊಡುಗೆಯಾದ ಗಡಿಯಾರದ ಗಂಟೆ ಪ್ರತಿ ಗಂಟೆಗೊಮ್ಮೆ ಬಾರಿಸುತ್ತದೆ.

ಇದು ಶಾಸಕರು ಕೊಡಿಸಿದ ಗಂಟೆ ಎಂದು ಮತದಾರರ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಶಾಸಕರ ಕೊಡುಗೆ ನೆನಪು ಮಾಡಿಕೊಡುತ್ತದೆ ಎಂದು ಬಿಜೆಪಿ ಮುಖಂಡ ರಾಜು ಬಾಕಳೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.