ಮಹಿಳೆಯರು ಹೆಚ್ಚಿರುವ ಕಡೆ ಪ್ರತ್ಯೇಕ ಮತಗಟ್ಟೆ ನಿರ್ಮಾಣ

First Published 18, Feb 2018, 10:25 AM IST
Karnataka Assembly Election 2018
Highlights

ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂಬ ಉದ್ದೇಶವನ್ನು ಆಯೋಗ ಹೊಂದಿದೆ. ವಿವಿಧ ಕಾರಣಗಳಿಂದ ಮತಗಟ್ಟೆಗೆ ನಡೆದುಕೊಂಡು ಬಾರಲು ಸಾಧ್ಯವಾಗದ 12 ಲಕ್ಷ ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ.

ಬೆಂಗಳೂರು : ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂಬ ಉದ್ದೇಶವನ್ನು ಆಯೋಗ ಹೊಂದಿದೆ. ವಿವಿಧ ಕಾರಣಗಳಿಂದ ಮತಗಟ್ಟೆಗೆ ನಡೆದುಕೊಂಡು ಬಾರಲು ಸಾಧ್ಯವಾಗದ 12 ಲಕ್ಷ ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ.

ಅಂಗವಿಕಲರು, ಕಾಯಿಲೆಗಳಿಂದ ಬಳಲುತ್ತಿರುವವರನ್ನು ಮತಗಟ್ಟೆಗೆ ಕರೆದುಕೊಂಡು ಬರುವುದಕ್ಕಾಗಿ ವ್ಹೀಲ್‌ ಚೇರ್ ಸೇರಿದಂತೆ ವಾಹನ ಸೌಲಭ್ಯ ಕಲ್ಪಿಸಲಾಗುವುದು.

ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳಲ್ಲಿ ಮಹಿಳಾ ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ಇಲ್ಲಿ ಮಹಿಳೆಯರನ್ನೇ ಚುನಾವಣಾ ಸಿಬ್ಬಂದಿಯಾಗಿ ಹಾಗೂ ಭದ್ರತೆಗೆ ನಿಯೋಜಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್‌ಕುಮಾರ್ ತಿಳಿಸಿದರು.

loader