Asianet Suvarna News Asianet Suvarna News

ರೆಸ್ಟೋರೆಂಟ್'ನಲ್ಲಿ ಕನ್ನಡ ಬಳಕೆ ಇಲ್ಲದ್ದನ್ನು ನೋಡಿ ಕರವೇ ಕಾರ್ಯಕರ್ತರ ಆಕ್ರೋಶ

ಹಿಂದಿ ಹೇರಿಕೆ ವಿರುದ್ಧ ಆಂದೋಲನದ ಬಳಿಕ ಕನ್ನಡಪರ ಕಾರ್ಯಕರ್ತರ ಕೆಂಗಣ್ಣಿಗೆ ಇಂಗ್ಲೀಷ್ ಕೂಡಾ ಗುರಿಯಾಗಿದೆ.

karnataka Anti hindi Row now also in english

ನವದೆಹಲಿ (ಜು.15): ಹಿಂದಿ ಹೇರಿಕೆ ವಿರುದ್ಧ ಆಂದೋಲನದ ಬಳಿಕ ಕನ್ನಡಪರ ಕಾರ್ಯಕರ್ತರ ಕೆಂಗಣ್ಣಿಗೆ ಇಂಗ್ಲೀಷ್ ಕೂಡಾ ಗುರಿಯಾಗಿದೆ.

ಹಿಂದಿ ವಿರೋಧಿ ಆಂದೋಲನ ನಡೆಯುತ್ತಿರುವಾಗ ಅದರ ಮಧ್ಯದಲ್ಲಿಯೇ ಇಲ್ಲಿನ ಇಸಿಒ ಟೆಕ್ ಪಾರ್ಕ್’ವೊಂದರ ಸಮೀಪದಲ್ಲಿರುವ  ಮಾಲ್’ನ ರೆಸ್ಟೋರೆಂಟ್’ವೊಂದರಲ್ಲಿ ಇಂಗ್ಲೀಷ್ ಮತ್ತು ಹಿಂದಿ ಮಾತ್ರ ಬೋರ್ಡ್ ಇದೆ. ಕನ್ನಡದಲ್ಲಿ ಇಲ್ಲದೇ ಇರುವುದನ್ನು ಕಂಡು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಶೆಟ್ಟಿ ನೇತೃತ್ವದ ಬಣ ರೆಸ್ಟೋರೆಂಟ್ ಮೇಲೆ ಕ್ರಮ ಕೈಗೊಂಡಿದೆ.

ನಮ್ಮದೇ ನೆಲವನ್ನು ಬಳಸಿಕೊಂಡು ಬ್ಯಸಿನೆಸ್, ಕೈಗಾರಿಕೆಗಳನ್ನು ನಡೆಸುತ್ತಾರೆ. ನಮ್ಮದೇ ವಿದ್ಯುತ್ತನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಆದರೆ ಅವರು ಕನ್ನಡವನ್ನು ಮಾತ್ರ ಬಳಸುವುದಿಲ್ಲ. ಕನ್ನಡಿಗರಿಗೆ ಮಾತ್ರ ಕೆಲಸ ಕೊಡುವುದಿಲ್ಲ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಂಡೆವು ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಇಂಗ್ಲೀಷ್ ಮತ್ತು ಹಿಂದಿಯನ್ನು ಕರ್ನಾಟಕದಲ್ಲಿ ಬಳಸುವುದಾದರೆ ಕನ್ನಡವನ್ನು ದೆಹಲಿ ಮತ್ತಿತರ ಕಡೆಯೂ ಬಳಸಿ. ಆಗ ನಾವು ನಿಮ್ಮ ಭಾಷೆಯನ್ನು ಇಲ್ಲಿ ಬಳಸುತ್ತೇವೆ ಎಂದು ಒತ್ತಾಯಿಸಿದ್ದಾರೆ.

 

Follow Us:
Download App:
  • android
  • ios