Asianet Suvarna News Asianet Suvarna News

ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಸಂಪೂರ್ಣ ಸ್ಥಗಿತ

ನಿನ್ನೆ ತಡರಾತ್ರಿ ಕೆ ಎಸ್ ಆರ್ ಟಿ ಸಿ ಯ ಬಸ್ ಗೆ ತಮಿಳುನಾಡಿನಲ್ಲಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಒಂದೆಡೆ ಕೆಎಸ್ಆರ್ಟಿಸಿ ಸಂಚಾರ ಸ್ಥಗಿತಗೊಳಿಸಿದ ಬೆನ್ನಲ್ಲೇ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಕೂಡ ಬಸ್ ಸಂಚಾರ ಸ್ಥಗಿತಗೊಳಿಸಿತು.. ಇದರಿಂದ ಜನ ಪರದಾಡುವಂತಾಗಿತ್ತು.

karnataka and tamilnadu buses stops

ಬೆಂಗಳೂರು(ಡಿ.05):  ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಹೃದಯಾಘಾತವಾಗಿರೋ ಸುದ್ದಿ ಹೊರಬೀಳುತ್ತಿದಂತೆ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.  ನಿನ್ನೆ ತಿರುವಣ್ಣಾಮಲೈ ನಿಂದ ಬೆಂಗಳೂರಿಗೆ ಬರುತ್ತಿದ್ದ 2  ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ  ಕಿಡಿಗೇಡಿಗಳು ಕಲ್ಲು ತೂರಾಟ  ನಡೆಸುತ್ತಿದಂತೆ  ಬಸ್ ಸಂಚಾರವನ್ನೇ ಸ್ಥಗಿತಗೊಳಿಸಲಾಗಿದೆ.

ನಿನ್ನೆ ತಡರಾತ್ರಿ ಕೆ ಎಸ್ ಆರ್ ಟಿ ಸಿ ಯ ಬಸ್ ಗೆ ತಮಿಳುನಾಡಿನಲ್ಲಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಒಂದೆಡೆ ಕೆಎಸ್ಆರ್ಟಿಸಿ ಸಂಚಾರ ಸ್ಥಗಿತಗೊಳಿಸಿದ ಬೆನ್ನಲ್ಲೇ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಕೂಡ ಬಸ್ ಸಂಚಾರ ಸ್ಥಗಿತಗೊಳಿಸಿತು.. ಇದರಿಂದ ಜನ ಪರದಾಡುವಂತಾಗಿತ್ತು.

ಬೆಂಗಳೂರಿನ ಶಾಂತಿನಗರದಿಂದ ತಮಿಳುನಾಡಿಗೆ ತೆರಳಬೇಕಿದ್ದ ಬಸ್ಗಳು ತೆರಳಲು ಸಿದ್ಧವಾಗಿದ್ದರೂ, ನಿಲ್ಲಿಸುವ ಸೂಚನೆ ಬಂದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿಯೇ ನಿಲ್ಲಿಸಲಾಗಿತ್ತು.. ನಗರದಿಂದ ೪೭೦ ಷಡ್ಯೂಲ್ನಲ್ಲಿ ಬಸ್ಗಳು ತಮಿಳುನಾಡಿಗೆ ನಿತ್ಯ ತೆರಳುತ್ತವೆ. ಇವೆಲ್ಲವನ್ನೂ ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿನಿಂದ ಕೂಡ ಇದೇ ಸಂಖ್ಯೆಯ ಬಸ್ಗಳ ಸೇವೆ ಇತ್ತು. ಅದನ್ನ ಸ್ಥಗಿತಗೊಳಿಸಲಾಗಿದೆ.. ಬೆಂಗಳೂರಿನಿಂದ ಪ್ರತಿ ಒಂದು ಗಂಟೆಗೆ ಒಂದು ವೋಲ್ವೊ ಬಸ್ ತೆರಳುತ್ತಿತ್ತು. ಅದನ್ನೂ ನಿಲ್ಲಿಸಲಾಗಿದ್ದು, ಪ್ರತಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದ್ದು, ಆಯಾ ಭಾಗದ ಮಾಹಿತಿ ಸಿಕ್ಕ ಮೇಲೆ, ಪರಿಸ್ಥಿತಿ ಆಧರಿಸಿ ಮುಂದಿನ ಸಂಚಾರ ನಿರ್ಧರಿಸಲಾಗುವುದು ಎಂದು ಕೆಎಸ್ಆರ್ಟಿಸಿ ಎಂಡಿ ರಾಜೆಂದರ್ ಕುಮಾರ ಕಟಾರಿಯಾ ತಿಳಿಸಿದ್ದಾರೆ.

ಸದ್ಯಕ್ಕೆ ಉಬಯ ರಾಜ್ಯಗಳ ಸಂಪರ್ಕ ಕಲ್ಪಿಸುತ್ತಿದ್ದ ಸಾರಿಗೆ ಬಂದ್ ಆಗಿದೆ. ಜನ ಪರದಾಡುವಂತಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಉಭಯ ರಾಜ್ಯಗಳ ಬಸ್ ಸಂಚಾರ ಸ್ಥಗಿತವಾಗಲಿದೆ.