ದಾವಣಗೆರೆ : ರಾಜ್ಯ ಸಮ್ಮಿಶ್ರ ಸರ್ಕಾರ ಪತನದ ಚರ್ಚೆ ಲೋಕಸಭಾ ಚುನಾವಣೆ ಸಂದರ್ಭದಿಂದಲೂ ಕೂಡ ನಡೆಯುತ್ತಿದೆ. ಇದೀಗ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಕೂಡ ಸರ್ಕಾರದ ಭವಿಷ್ಯ ನುಡಿದಿದ್ದಾರೆ. 

ದಾವಣಗೆರೆಯಲ್ಲಿ ಮಾತನಾಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಸಮ್ಮಿಶ್ರ ಸರ್ಕಾರ ಬೀಳುವುದು ಖಚಿತ. ಸರ್ಕಾರ ಬೀಳದೇ ಹೋದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು. 

ರಾಜ್ಯ ಸರ್ಕಾರ ಪತನದ ಬಳಿಕ ಬಿಜೆಪಿ ಅಧಿಕಾರಕ್ಕೆ ಏರಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ. ಆಗ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗುತ್ತಾರೆ ಎಂದರು. 

ಇನ್ನು ಕರ್ನಾಟಕ ಸರ್ಕಾರ ರೇವಣ್ಣ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರಿಗೆ ಮಾತ್ರ ಸೇರಿದ್ದು ಎನ್ನುವಂತಾಗಿದೆ. 

ಯಡಿಯೂರಪ್ಪನವರು ಕಾಯ್ದು ನೋಡಿ ಎಂದು ಹೇಳಿದ್ದರು.  ಅಲ್ಲದೇ ನಾವು ಯಾವುದೇ ಆಪರೇಷನ್ ಕಮಲವನ್ನೂ ಮಾಡುವುದಿಲ್ಲ.  ಆದರೆ ಅತೃಪ್ತ ಕಾಂಗ್ರೆಸಿಗರಿಂದಲೇ ಕಂಟಕವಾಗಲಿದೆ ಎಂದರು.