ಬೆಂಗಳೂರು [ಜು.16] : ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ನೀಡಿ ಅತೃಪ್ತರಾಗಿ ಹೊರ ನಡೆದ ಶಾಸಕರ ಮೇಲೆ ಕೇಸ್ ಹಾಕುವುದಾಗಿ ಮೈತ್ರಿ ಸರ್ಕಾರ ಬೆದರಿಸುತ್ತಿದೆ ಎಂದು ಬಿಜೆಪಿ ಶಾಸಕರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ. 

ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಮೈತ್ರಿ ಸರ್ಕಾರದಿಂದ ಬಿಟ್ಟು ಹೋದ ಶಾಸಕರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಕರ್ನಾಟಕ ರಾಜಕೀಯದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಹಳೆ ಪ್ರಕರಣಗಳನ್ನು ರೀ ಓಪನ್ ಮಾಡಿ, ಯಾರು ಬಿಟ್ಟು ಹೋಗುತ್ತಾರೋ ಅವರ ಮೇಲೆ ಕೇಸ್ ಹಾಕುವುದಾಗಿ ಹೇಳುತ್ತಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. 

ಸದ್ಯ ಮೈತ್ರಿ ಸರ್ಕಾರವು ಸುಭದ್ರವಾಗಿ ಮುಂದುವರಿಯುವುದೆ ಅನುಮಾನವಾಗಿರುವ ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಾಂಬ್ ಸಿಡಿಸಿದ್ದಾರೆ.