ಹಾವೇರಿ(ಆ.15): ದೇಶವೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದರೆ ಇತ್ತ ಹಾವೇರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಗೋವಾದಲ್ಲಿನ ಮೀಟಿಂಗ್‌ನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ಅಪಘಾತವಾದ  ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಹಗರಿಬೊಮ್ಮನಹಳ್ಳಿಯ ಕೊಟ್ರೆಶ್ ಸಿದ್ರಾಮಪ್ಪ(45), ದಾವಣೆಗೆರೆಯ ಆನಂದ್ ಕುಮಾರ್(36), ಸತೀಶ್ ಕುಮಾರ್(38) ಮೃತ ದುರ್ದೈವಿಗಳು.

ಇದನ್ನೂ ಓದಿ: ಪ್ರವಾಹ ಪೀಡಿತರಿಗೆ ಆಹಾರ ಸಾಮಗ್ರಿ ನೀಡಲು ಹೋದವರೇ ಸ್ಮಶಾನ ಸೇರಿದ್ರು!

ತುರ್ತು ಮೀಟಿಂಗ್‌ನಲ್ಲಿ ಪಾಲ್ಗೊಳ್ಳಲು ಮೂವರು ಕಾರಿನಲ್ಲಿ ಹೊರಟಿದ್ದರು. ಆದರೆ  ಬ್ಯಾಡಗಿ ಸಮೀಪದ ಮೊಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಅತಿ ವೇಗದಿಂದ ಚಲಿಸುತ್ತಿದ್ದ  ಕಾರಣ ನಿಯಂತ್ರಣ ಕೂಡ ತಪ್ಪಿದೆ. ಹೀಗಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಇತ್ತ ಡಿವೈಡರ್‌ಗೆ ಡಿಕ್ಕಿ ಹೊಡೆದ  ಕಾರು ಸಂಪೂರ್ಣ ನಜ್ಜಗುಜ್ಜಾಗಿದೆ. 

ಇದನ್ನೂ ಓದಿ: ಹೀಗ್ ಮಾಡಿ, ರಸ್ತೆ ಅವಘಡ ತಡೀರಿ...

ಸಿದ್ರಾಮಪ್ಪ, ಆನಂದ್ ಕುಮಾರ್ ಹಾಗೂ ಸತೀಶ್ ಕುಮಾರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದ್ದು, ಮೃತ ಕುಟುಂಬಸ್ಥರ ಸ್ವಾತಂತ್ರ್ಯ ಸಂಭ್ರಮವನ್ನು ಕಸಿದುಕೊಂಡಿದೆ.