ಟೀಕೆಗೆ ಹೆದರಿ ಪುತ್ರನ ಹೆಸರು ಬದಲಿಗೆ ಸೈಫ್‌ ನಿರ್ಧಾರ: ಕರೀನಾ

First Published 11, Mar 2018, 7:44 AM IST
Kareena Reveal Son Taimur Name Issue
Highlights

ಭಾರತದ ಮೇಲೆ ದಾಳಿ ನಡೆಸಿದ್ದ ಮಂಗೋಲಿಯನ್ನರ ಕ್ರೂರ ದೊರೆ ತೈಮೂರ್‌ನ ಹೆಸರನ್ನು ತಮ್ಮ ಪುತ್ರನಿಗೆ ಇಟ್ಟಿದ್ದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಹೆಸರು ಬದಲಾವಣೆಗೆ ಸೈಫ್‌ ಅಲಿ ಖಾನ್‌ ನಿರ್ಧರಿಸಿದ್ದರು ಎಂಬ ವಿಷಯವನ್ನು ಸೈಫ್‌ರ ಪತ್ನಿ ಕರೀನಾ ಕಪೂರ್‌ ಬಹಿರಂಗಪಡಿಸಿದ್ದಾರೆ.

ನವದೆಹಲಿ: ಭಾರತದ ಮೇಲೆ ದಾಳಿ ನಡೆಸಿದ್ದ ಮಂಗೋಲಿಯನ್ನರ ಕ್ರೂರ ದೊರೆ ತೈಮೂರ್‌ನ ಹೆಸರನ್ನು ತಮ್ಮ ಪುತ್ರನಿಗೆ ಇಟ್ಟಿದ್ದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಹೆಸರು ಬದಲಾವಣೆಗೆ ಸೈಫ್‌ ಅಲಿ ಖಾನ್‌ ನಿರ್ಧರಿಸಿದ್ದರು ಎಂಬ ವಿಷಯವನ್ನು ಸೈಫ್‌ರ ಪತ್ನಿ ಕರೀನಾ ಕಪೂರ್‌ ಬಹಿರಂಗಪಡಿಸಿದ್ದಾರೆ.

ಇಂಡಿಯಾ ಟುಡೇ ಶೃಂಗದಲ್ಲಿ ಮಾತನಾಡಿದ ಕರೀನಾ, ವಿವಾದದ ಹಿನ್ನೆಲೆಯಲ್ಲಿ ಪುತ್ರನ ಹೆಸರು ತೈಮೂರ್‌ ಎಂಬುದರ ಬದಲಾಗಿ ಫೈಯಾಜ್‌ ಎಂದು ಬದಲಿಸಲು ಸೈಫ್‌ ಮುಂದಾಗಿದ್ದರು. ಆದರೆ ಅದಕ್ಕೆ ನಾನೇ ತಡೆ ಒಡ್ಡಿದ್ದೆ. ತೈಮೂರ್‌ ಎಂಬ ಹೆಸರಿನ ಅರ್ಥದಂತೆ ನನ್ನ ಮಗ ಉಕ್ಕಿನ ಮನುಷ್ಯನಂತೆ ಬೆಳೆಯಲಿದ್ದಾನೆ’ ಎಂದು ಕರೀನಾ ಹೇಳಿದ್ದಾರೆ.

loader