ರಾಜ್ಯೋತ್ಸವ ದಿನದಂದು ಕರಾಳ ದಿನವನ್ನಾಚರಿಸಿದ ನಾಡವಿರೋಧಿ ಎಂಇಎಸ್ ಸಂಘಟನೆಯನ್ನು ಸರ್ಕಾರ ನಿಷೇಧಿಸಬೇಕು ಎಂದು ಪ್ರತಿಭಟನಕಾರರರು ಆಗ್ರಹಿಸಿದ್ದಾರೆ.
ಬೆಂಗಳೂರು (ನ.03): ನವೆಂಬರ್ 1 ರಂದು ಬೆಳಗಾವಿಯಲ್ಲಿ ಎಂಇಎಸ್ ಕಾಯ೯ಕತ೯ರು ಕರಾಳ ದಿನಾಚರಣೆ ಆಚರಿಸಿರುವುದನ್ನು ವಿರೊಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ರಾಜ್ಯೋತ್ಸವ ದಿನದಂದು ಕರಾಳ ದಿನವನ್ನಾಚರಿಸಿದ ನಾಡವಿರೋಧಿ ಎಂಇಎಸ್ ಸಂಘಟನೆಯನ್ನು ಸರ್ಕಾರ ನಿಷೇಧಿಸಬೇಕು ಎಂದು ಪ್ರತಿಭಟನಕಾರರರು ಆಗ್ರಹಿಸಿದ್ದಾರೆ.
ಕರಾಳ ದಿನವನ್ನು ಆಚರಿಸಿದವರನ್ನು ಕೂಡಲೇ ಗಡಿಪಾರು ಮಾಡುವಂತೆ ಹಾಗೂ ಮೆರವಣಿಗೆಯಲ್ಲಿ ಬಂದೂಕು ಪ್ರದಶ೯ನ ಮಾಡಿದ್ದ ಪುಂಡರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ವೇದಿಕೆ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಾರಾಯಣ ಗವಡ ಬಣದಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಯಾ೯ಲಿಯಲ್ಲಿ ನೂರಾರು ಕರವೇ ಕಾಯ೯ಕತ೯ರು ಭಾಗಿಯಾಗಿದ್ದರು.