ಹೊಸ ವರ್ಷದ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ವಿರೋಧ

First Published 7, Dec 2017, 3:17 PM IST
KaRaVe Protest against Sunny Leon coming tp New Year Celebration
Highlights

ಟೈಮ್ಸ್  ಕ್ರಿಯೆಷನ್ ಆಯೋಜಿಸಿರುವ ಹೊಸ ವರ್ಷದ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಬರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಮೌರ್ಯ ಸರ್ಕಲ್‌ ಬಳಿ ಪ್ರತಿಭಟನೆ ನಡೆಸಿದೆ.

ಬೆಂಗಳೂರು (ಡಿ.06): ಟೈಮ್ಸ್  ಕ್ರಿಯೆಷನ್ ಆಯೋಜಿಸಿರುವ ಹೊಸ ವರ್ಷದ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಬರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಮೌರ್ಯ ಸರ್ಕಲ್‌ ಬಳಿ ಪ್ರತಿಭಟನೆ ನಡೆಸಿದೆ.

ಡಿಸೆಂಬರ್ 31 ರ ರಾತ್ರಿ ಹೊಸ ವರ್ಷದ ಪ್ರಯುಕ್ತ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಟೈಮ್ಸ್‌ ಕ್ರಿಯೆಷನ್ ಸನ್ನಿ ನೈಟ್ಸ್ ಕಾರ್ಯಕ್ರಮ ಆಯೋಜಿಸಿದೆ.  ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಸಬಾರದು ಎಂದು ಕರವೇ ಯುವಸೇನೆ ವಿರೋಧ ವ್ಯಕ್ತಪಡಿಸಿದೆ.

ಇದು ಕನ್ನಡದ ಸಂಸ್ಕೃತಿಯಲ್ಲ.  ಪರಭಾಷಿಕರು ಕನ್ನಡದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕರವೇ ಯುವ ಸೇನೆ ವಿರೋಧಿಸಿದೆ.