ವಿಕಲಾಂಗ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದ ವಿಧವೆಗೆ ಕರವೇ ಕಾರ್ಯಕರ್ತನೋರ್ವ ಲಕ್ಷಾಂತರ ರೂಪಾಯಿ ವಂಚಿಸಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು(ಜೂ.11): ವಿಕಲಾಂಗ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದ ವಿಧವೆಗೆ ಕರವೇ ಕಾರ್ಯಕರ್ತನೋರ್ವ ಲಕ್ಷಾಂತರ ರೂಪಾಯಿ ವಂಚಿಸಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾರ್ವತಿ ಎಂಬಾ ಮಹಿಳೆ 2011ರಲ್ಲಿ ಉಮೇಶ್ ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ಮಧ್ಯೆ ಮದುವೆಯಾಗಿದ್ಲು. ಆದ್ರೆ 2016 ರಲ್ಲಿ ಉಮೇಶ್ ಅಪಘಾತದಿಂದ ಸಾವಿಗೀಡಾಗಿದ್ದು, ಪಾರ್ವತಿ ನೆರವಿಗೆ ಯಾರು ಇರೋದಿಲ್ಲ.ಅಷ್ಟೇ ಅಲ್ಲದೇ ಇವರು ಉಳಿದುಕೊಂಡಿದ್ದ ಮನೆಯ ಅಡ್ವಾನ್ಸ್ ಹಣ ಮತ್ತು ಉಮೇಶ್ ಬೈಕನ್ನು ಕೂಡ ಉಮೇಶ್ ಪೋಷಕರು ಕಿತ್ತುಕೊಂಡು ಹೋಗಿರುತ್ತಾರೆ.

ಈ ವೇಳೆ ಪಾರ್ವತಿಗೆ ನ್ಯಾಯ ಕೊಡಿಸುತ್ತೇವೆ ಎಂದು ಬಂದ ರಾಜೇಶ್, ಮೊದಲು 90 ಸಾವಿರ ಕೀಳುತ್ತಾನೆ. ಬಳಿಕ ಸರ್ಕಾರದಿಂದ ಲೋನ್ ಕೊಡಿಸುತ್ತೇನೆ ಎಂದು 1 ಲಕ್ಷ ಕೀಳುತ್ತಿದ್ದಾನೆ. ಆದರೆ ಇದುವರೆಗೂ ಲೋನೂ ಇಲ್ಲ, ಯಾವ ಪರಿಹಾರವನ್ನೂ ಕೊಡಿಸಿಲ್ಲ. ಹಣ ವಾಪಸ್ ಕೇಳಲು ಹೋದರೆ ಬಾಯಿಗೆ ಬಂದಹಾಗೆ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾನೆ . ನನ್ನ ಹಣವನ್ನು ರಾಜೇಶ್'​​ನಿಂದ ವಾಪಸ್ ಕೊಡಿಸಿ ಅಂತಾ ಮೋಸಹೋದ ಪಾರ್ವತಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.