ಬೈನಾ ಬೀಚ್​ನಲ್ಲಿ  ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಕನ್ನಡಿಗರ ಕುಟುಂಬ ಬೀದಿಗೆ ಬಿದ್ದಿದೆ.  ಅಷ್ಟೇ ಅಲ್ಲದೆ ಬಸವೇಶ್ವರ ದೇವಾಲಯವನ್ನು ನೋಟೀಸ್​ ಕೂಡಾ ನೀಡದೆ ಧ್ವಂಸ ಮಾಡಲಾಗಿದೆ.

ಪಣಜಿ (ಸೆ.29): ಬೈನಾ ಬೀಚ್​ನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಕನ್ನಡಿಗರ ಕುಟುಂಬ ಬೀದಿಗೆ ಬಿದ್ದಿದೆ. ಅಷ್ಟೇ ಅಲ್ಲದೆ ಬಸವೇಶ್ವರ ದೇವಾಲಯವನ್ನು ನೋಟೀಸ್​ ಕೂಡಾ ನೀಡದೆ ಧ್ವಂಸ ಮಾಡಲಾಗಿದೆ.

ಧಾರ್ಮಿಕ ಶ್ರದ್ಧಾ ಕೇಂದ್ರವೊಂದನ್ನು ಈ ರೀತಿ ಧ್ವಂಸ ಮಾಡಿರುವುದಕ್ಕೆ ಅಲ್ಲಿನ ಸ್ಥಳೀಯ ಕನ್ನಡಿಗರು ಗೋವಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಧಾರ್ಮಿಕ ಭಾವನೆಗಳ ಮೇಲೆ ಗೋವಾ ಸರ್ಕಾರ ಪ್ರಹಾರ ನಡೆಸುತ್ತಿದ್ದರೂ ಸಹ ಲಿಂಗಾಯತ ನಾಯಕರು ತುಟಿ ಬಿಚ್ಚದಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೋವಾ ಸಿಎಂ ಮನೋಹರ್ ಪರ್ರಿಕರ್ ಕೂಡಾ ಪ್ರತಿಕ್ರಿಯೆ ಕೊಡದೇ ಇರುವುದು ಕೂಡಾ ಆಕ್ರೋಶಕ್ಕೆ ಕಾರಣವಾಗಿದೆ.