ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಡೀಮಡಿಮ ಮೊಳಗಿದೆ. ಪಾಲಿಕೆ ಅಧ್ಯಕ್ಷ ಗಾದಿ ಕನ್ನಡಿಗನಿಗೆ ಒಲಿದಿದೆ. ದಶಕದ ಬಳಿಕ ಮೇಯರ್ ಪಟ್ಟ ಕನ್ನಡಿಗರ ಪಾಲಾಗಿದೆ.
ಬೆಳಗಾವಿ (ಮಾ. 01): ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಡೀಮಡಿಮ ಮೊಳಗಿದೆ. ಪಾಲಿಕೆ ಅಧ್ಯಕ್ಷ ಗಾದಿ ಕನ್ನಡಿಗನಿಗೆ ಒಲಿದಿದೆ. ದಶಕದ ಬಳಿಕ ಮೇಯರ್ ಪಟ್ಟ ಕನ್ನಡಿಗರ ಪಾಲಾಗಿದೆ.
ಮೇಯರ್ ಆಗಿ ಬಸವರಾಜ್ ಚಿಕ್ಕಲದಿನ್ನಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ಮೇಘನ್ನವರ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಬೆಳಗಾವಿ ಪಾಲಿಕೆಯ ಐದನೇ ಕನ್ನಡದ ಮೇಯರ್ ಇವರು. ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಏಕೈಕ ಕನ್ನಡದ ಅಭ್ಯರ್ಥಿ ಬಸವರಾಜ್ ಆಗಿದ್ದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ಪಾರುಪತ್ಯ ಮುರಿದು ಕನ್ನಡಿಗರ ಕಾರುಬಾರು ಶುರುವಾಗಿದೆ.
ಉಪಮೇಯರ್ ಸ್ಥಾನಕ್ಕೆ 5 ಮಂದಿ ಆಕಾಂಕ್ಷಿಗಳ ನಾಮಪತ್ರ ಸಲ್ಲಿಸಿದ್ದಾರೆ. ಫಲಿತಾಂಶ ಇನ್ನು ಬರಬೇಕಷ್ಟೇ.
