ಬೆಂಗಳೂರು :  ಖ್ಯಾತ ಪ್ರಕಾಶನ ಸಂಸ್ಥೆಯಾದ ಸಾವಣ್ಣ ಪ್ರಕಾಶನವು ನೂರು ಕೃತಿಗಳನ್ನು ಪ್ರಕಟಿಸಿದ ಸಂಭ್ರಮದಲ್ಲಿದ್ದು, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್‌ರಾವ್‌ ಅವರ ಎಲ್‌ ಪುಸ್ತಕ ಬಿಡುಗಡೆ ಮೂಲಕ ತನ್ನ ಶತಕದ ಸಂಭ್ರಮವನ್ನು ಭಾನುವಾರ ಆಚರಿಸಿಕೊಳ್ಳುತ್ತಿದೆ.

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವಲ್ಡ್‌ರ್‍ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಸಾವಣ್ಣ ಪ್ರಕಾಶನದ ‘ಶತಕದ ಸಂಭ್ರಮ’ ಮತ್ತು ‘ಎಲ್‌’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು, ನಾಡೋಜ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ‘ಎಲ್‌’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸಮಾರಂಭದ ಮುಖ್ಯಅತಿಥಿಗಳಾಗಿ ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ, ‘ವಿಶ್ವವಾಣಿ’ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌, ಲೇಖಕ ಸುರೇಶ್‌ ಪದ್ಮನಾಭನ್‌, ‘ವಿಜಯಕರ್ನಾಟಕ’ದ ಲವಲವಿಕೆ- ಬೋಧಿವೃಕ್ಷ ಸಂಪಾದಕ ಶ್ರೀವತ್ಸ ನಾಡಿಗ್‌, ‘ಎಲ್‌’ ಕೃತಿಯ ಲೇಖಕ ಹಾಗೂ ‘ಕನ್ನಡಪ್ರಭ’ ಪುರವಣೆ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಉಪಸ್ಥಿತರಿರುವರು.