ಈ ವರದಿ ಓದಿದ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ತಿತಿಮತಿ ಬಳಿಯ ಚೇಣಿ ಹಡ್ಲು ಹಾಡಿಯಲ್ಲಿರುವ 150-200 ಕುಟುಂಬಗಳು ಅರಣ್ಯದೊಳಗೆ ಜನಸಂಪರ್ಕ ಸಭೆ ಆಯೋಜಿಸಿದ್ದರು.

ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರದ ಸುತ್ತೋಲೆಯ ಆಧಾರದಲ್ಲಿ ‘ಹುಲಿಗಳ ಸಂರಕ್ಷಣೆಯ ಜೊತೆಗೆ ಅರಣ್ಯವಾಸಿಗಳ ಹಿತವೂ ಮುಖ್ಯ' ಶೀರ್ಷಿಕೆಯಡಿ ಕನ್ನಡ ಪ್ರಭದಲ್ಲಿ ಏ.17ರಂದು ಪ್ರಕಟವಾಗಿದ್ದ ಸಂಪಾದಕೀಯ ಇದೀಗ ಹೊಸ ಹೋರಾಟಕ್ಕೆ ಮುನ್ನುಡಿಯಾಗಿದೆ. ಈ ವರದಿಯ ಪರಿಣಾಮವಾಗಿ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಲೆತಲಾಂತರ ಗಳಿಂದ ಬದುಕು ಕಟ್ಟಿಕೊಂಡಿರುವ ಅಡವಿ ಮಕ್ಕಳು, ಕಾಡಿನಲ್ಲಿ ತುರ್ತು ಸಭೆ ನಡೆಸಿ ಈ ಸುತ್ತೋಲೆಯನ್ನು ಹಿಂಪಡೆಯುವ ದಿಸೆಯಲ್ಲಿ ನಡೆಸ ಬೇಕಾದ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದ್ದಾರೆ. 
ಈ ವರದಿ ಓದಿದ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ತಿತಿಮತಿ ಬಳಿಯ ಚೇಣಿ ಹಡ್ಲು ಹಾಡಿಯಲ್ಲಿರುವ 150-200 ಕುಟುಂಬಗಳು ಅರಣ್ಯದೊಳಗೆ ಜನಸಂಪರ್ಕ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಜನಪ್ರತಿನಿಧಿಗಳು, ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. 10 ದಿನದಲ್ಲಿ ಸುತ್ತೋಲೆಯನ್ನು ವಾಪಸ್‌ ಪಡೆಯದಿದ್ದರೆ ನಾಗರ ಹೊಳೆ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.