ರಾಜ್ಯವನ್ನೇ ಬೆಚ್ಚಿ ಬೀಳಿಸುವ ರಾಜ್ಯದ ಅತಿದೊಡ್ಡ ಟೆಲಿಫೋನ್ ಕದ್ದಾಲಿಕೆ ಪ್ರಕರಣವೀಗ ಬೆಳಕಿಗೆ ಬಂದಿದೆ. ಓರ್ವ IPS ಅಧಿಕಾರಿ ಮತ್ತೊಬ್ಬ IPS ಅಧಿಕಾರಿಯ ಫೋನ್ ಸಂಭಾಷಣೆಯ ಕದ್ದಾಲಿಕೆ ಮಾಡಿರುವ ಪ್ರಕರೆಣ ಇದಾಗಿದೆ. ಈ ಟೆಲಿಫೋನ್ ಸಂಭಾಷಣೆಯಲ್ಲಿ ಕಾವೇರಿ ಗಲಾಟೆ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಕನ್ನಡ ಪರ ಕಾರ್ಯಕರ್ತನೊಂದಿಗೆ ನಡೆಸಿದ ಮಾತುಕತೆ ಇದೆ ಎಂಬುವುದಾಗಿ ತಿಳಿದು ಬಂದಿದೆ.

ಬೆಂಗಳೂರು(ಜೂ.06): ರಾಜ್ಯವನ್ನೇ ಬೆಚ್ಚಿ ಬೀಳಿಸುವ ರಾಜ್ಯದ ಅತಿದೊಡ್ಡ ಟೆಲಿಫೋನ್ ಕದ್ದಾಲಿಕೆ ಪ್ರಕರಣವೀಗ ಬೆಳಕಿಗೆ ಬಂದಿದೆ. ಓರ್ವ IPS ಅಧಿಕಾರಿ ಮತ್ತೊಬ್ಬ IPS ಅಧಿಕಾರಿಯ ಫೋನ್ ಸಂಭಾಷಣೆಯ ಕದ್ದಾಲಿಕೆ ಮಾಡಿರುವ ಪ್ರಕರೆಣ ಇದಾಗಿದೆ. ಈ ಟೆಲಿಫೋನ್ ಸಂಭಾಷಣೆಯಲ್ಲಿ ಕಾವೇರಿ ಗಲಾಟೆ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಕನ್ನಡ ಪರ ಕಾರ್ಯಕರ್ತನೊಂದಿಗೆ ನಡೆಸಿದ ಮಾತುಕತೆ ಇದೆ ಎಂಬುವುದಾಗಿ ತಿಳಿದು ಬಂದಿದೆ.

ಐಪಿಎಸ್ ಅಧಿಕಾರಿಗಳ ಒಳಜಗಳದಿಂದ ಪೊಲೀಸ್ ಇಲಾಖೆಯೇ ತಲೆತಗ್ಗಿಸುವ ಪ್ರಕರಣ ನಡೆದಿದ್ದು, ಇತ್ತ ಕನ್ನಡಪರ ಸಂಘಟನೆಗಳಿಗೂ ಈ ಸುದ್ದಿ ಶಾಕ್ ನೀಡಿದಂತಿದೆ. ಐಪಿಎಸ್ ಅಧಿಕಾರಿ ಕನ್ನಡಪರ ಕಾರ್ಯಕರ್ತನೊಂದಿಗೆ ಸಂಭಾಷಣೆ ನಡೆಸುತ್ತಿದ್ದ ವೇಳೆ ಮತ್ತೊಬ್ಬ ಅಧಿಕಾರಿ ಅವರ ಫೋನನ್ನು ಟ್ಯಾಪ್ ಮಾಡಿದ್ದು, ಆ ಸಂಭಾಷಣೆಯ ಆಡಿಯೋವನ್ನು ಸೋರಿಕೆ ಮಾಡಿರುವುದಾಗಿಯೂ ತಿಳಿದು ಬಂದಿದೆ.

ಕಾವೇರಿ ಗಲಭೆಯ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಹಾಗೂ ಕನ್ನಡ ಪ್ರಕಾಶ್'ರವರು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ನಡುವೆ ಫೋನ್ ಸಂಭಾಷಣೆ ನಡೆದಿತ್ತು. ಆದರೆ ಅವರ ಫೋನ್'ನ್ನು ಟ್ಯಾಪ್ ಮಾಡಿಸಿದ್ದ ಡಿಸಿಪಿ ಅಜಯ್ ಹಿಲೋರಿ ಬಳಿಕ ಈ ಸಂಭಾಷಣೆಯನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಈ ಫೋನ್ ಕದ್ದಾಲಿಕೆ ಕುರಿತಾಗಿ ಚರಣ್ ರೆಡ್ಡಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಹೀಗಾಗಿ ಇದರ ಕುರಿತು ವಿಚಾರಣೆ ನಡೆಸುವಂತೆ ಡಿಜಿಪಿ ಆರ್. ಕೆ ದತ್ತಾ ಪೊಲೀಸ್ ಆಯುಕ್ತರಿಗೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದಾರೆ. ಹೀಗಿದ್ದರೂ ಆಯುಕ್ತ ಪ್ರವೀಣ್ ಸೂದ್ ಯಾವುದೇ ತನಿಖೆ ಆರಂಭಿಸಿಲ್ಲ. ಇವರ ಈ ನಡೆಯಿಂದ ಫೋನ್ ಕದ್ದಾಲಿಕೆ ನಡೆಸಿದ ಡಿಸಿಪಿ ಅಜಯ್ ಹಿಲೋರಿಗೆ ಆಯುಕ್ತ ಪ್ರವೀಣ್ ಸೂದ್ ರಕ್ಷಣೆ ನೀಡುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಅಲ್ಲದೇ ಐಪಿಎಸ್ ಅಧಿಕಾರಿಗಳ ನಡುವಿನ ಕಿತ್ತಾಟದಿಂದ ಕನ್ನಡ ಸಂಘಟನೆಗಳ ಮಾನ ಹರಾಜಾಗಿರುವುದೂ ನಿಜ.

ಇದಕ್ಕೆ ಸಂಬಂಧಿಸಿದ ಎಕ್ಸ್'ಕ್ಲೂಸಿವ್ ಮಾಹಿತಿಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿದ್ದು, ದಾಖಲೆಗಳೂ ಲಭ್ಯವಾಗಿವೆ.