4 ಲಕ್ಷ ಕ್ಯಾಶ್, ಕಾರು ಸಮೇತ ಕನ್ನಡ ಸಂಘಟನೆ ಉಪಾಧ್ಯಕ್ಷ ಎಸ್ಕೇಪ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 2:20 PM IST
Kannada Organisation vice president Gopi escape with 4 lakh cash and car of his friend
Highlights

- ಕನ್ನಡ ಸಂಘಟನೆ ಉಪಾಧ್ಯಕ್ಷನಿಂದ ಉದ್ಯಮಿಗೆ ದೋಖಾ 

-ಸ್ನೇಹಿತನಿಗೇ ಮೋಸ ಮಾಡಿದ ಕನ್ನಡ ಸಂಘಟನೆ ಉಪಾಧ್ಯಕ್ಷ 

- 4 ಲಕ್ಷ ಕ್ಯಾಶ್ ಹಾಗೂ ಕಾರ್ ಜೊತೆ ಎಸ್ಕೇಪ್ 

ಬೆಂಗಳೂರು (ಆ. 10): ಸಿಗರೇಟ್ ತರಲು ಹೇಳಿ ಕ್ಯಾಶ್ ಹಾಗೂ ಕಾರು ಸಮೇತ ಕನ್ನಡ ಸಂಘಟನೆ ಉಪಾಧ್ಯಕ್ಷ ಎಸ್ಕೇಪ್ ಆಗಿದ್ದಾರೆ.  ಜನನಿಭೂಮಿ ಬೆಂಗಳೂರು ಉಪಾಧ್ಯಕ್ಷ ಗೋಪಿ ಗೊರಗುಂಟೆಪಾಳ್ಯದ ಉದ್ಯಮಿ ಕುಮಾರ್ ಗೆ ದೋಖಾ ಎಸಗಿದ್ದಾರೆ. 

ಸಂಬಂಧಿಗಳೊಬ್ಬರು ಆಸ್ಪತ್ರೆಯಲ್ಲಿದ್ದಾರೆಂದು  ಕುಮಾರ್ ಪಾಂಡವಪುರ ಡಿಸಿಸಿ ಬ್ಯಾಂಕಿನಿಂದ 4 ಲಕ್ಷ ಹಣ ಡ್ರಾ ಮಾಡಿದ್ದರು.  ಈ ವೇಳೆ ಗೋಪಿ ಹಾಗೂ ಇನ್ನೊಬ್ಬ ಸ್ನೇಹಿತ ಕುಮಾರ್ ಜೊತೆಗಿದ್ದರು.  ಬೆಂಗಳೂರಿಗೆ ಬಂದು ಮೊದಲು ಒಬ್ಬ ಸ್ನೇಹಿತನನ್ನ ಡ್ರಾಪ್ ಮಾಡಿದ ಕುಮಾರ್ ನಂತರ ಗೋಪಿಯನ್ನ ಡ್ರಾಪ್ ಮಾಡಲು ತೆರಳುತ್ತಿದ್ದರು.  ಈ ವೇಳೆ ಚಿಕ್ಕಜಾಲ ಬಳಿ ಸಿಗರೇಟ್ ತರಲು ಗೋಪಿ ಹೇಳಿದ್ದರು.  ಆಗ ಕಾರ್ ನಿಂದ ಇಳಿದು ಹೋಗಿದ್ದಾರೆ ಕುಮಾರ್.  ಈ ವೇಳೆ ಕಾರು ಹಾಗೂ 4 ಲಕ್ಷ ಕ್ಯಾಶ್ ಜೊತೆ ಪರಾರಿಯಾಗಿದ್ದಾರೆ ಗೋಪಿ. 

ಬಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

loader