Asianet Suvarna News Asianet Suvarna News

ವಿಷನ್‌ನಲ್ಲಿ ಸಿದ್ದರಾ‘ಮಾಯ! ತಪ್ಪು ಕನ್ನಡ ಬಿತ್ತರಿಸಿ ಸಮಾರಂಭದಲ್ಲಿ ಎಡವಟ್ಟು

ಕನ್ನಡದ ಅನೇಕ ಶಬ್ದಗಳು ಅಪಭ್ರಂಶಗೊಂಡು ಪರದೆ ಮೇಲೆ ಹಾದು ಹೋದವು. ಕಾರ್ಯಕ್ರಮದ ಪ್ರಚಾರ, ಮುದ್ರಣ ಇತ್ಯಾದಿಗಳ ನಿರ್ವಹಣೆಯನ್ನು ಮುಂಬೈ ಮೂಲದ ಓಂ ಎಂಬುವರ ಮಾಲೀಕತ್ವದ ಫೇಸ್-1 ಎಂಬ ಸಂಸ್ಥೆಗೆ ನೀಡಲಾಗಿತ್ತು.

Kannada Grammer Mistake at Nava Karnataka Mission Programme

ಬೆಂಗಳೂರು(ಮಾ.04): ‘ನವ ಕರ್ನಾಟಕ ವಿಷನ್-2025‘ ಕಾರ್ಯಕ್ರಮದಲ್ಲಿ ಅಳವಡಿಸಿದ್ದ ಬೃಹತ್ ಪರದೆಯಲ್ಲಿ ಕನ್ನಡ ಶಬ್ದಗಳು ತಪ್ಪು ತಪ್ಪಾಗಿ ಬಿತ್ತರವಾದದ್ದು ಟೀಕೆಗೆ ಒಳಗಾಗಿದೆ. ವೇದಿಕೆ ಹಿಂಭಾಗದಲ್ಲಿ ಅಳವಡಿಸಿದ್ದ ಪರದೆಯಲ್ಲಿ ಕನ್ನಡದ ಹಲವು ಶಬ್ದಗಳ ಜೊತೆಗೆ ಮುಖ್ಯಮಂತ್ರಿ ಅವರ ಹೆಸರನ್ನು ‘ಸಿದ್ದರಾಮಾಯ’ ಎಂದು ಬಿಂಬಿಸಿತು.

ಕನ್ನಡದ ಅನೇಕ ಶಬ್ದಗಳು ಅಪಭ್ರಂಶಗೊಂಡು ಪರದೆ ಮೇಲೆ ಹಾದು ಹೋದವು. ಕಾರ್ಯಕ್ರಮದ ಪ್ರಚಾರ, ಮುದ್ರಣ ಇತ್ಯಾದಿಗಳ ನಿರ್ವಹಣೆಯನ್ನು ಮುಂಬೈ ಮೂಲದ ಓಂ ಎಂಬುವರ ಮಾಲೀಕತ್ವದ ಫೇಸ್-1 ಎಂಬ ಸಂಸ್ಥೆಗೆ ನೀಡಲಾಗಿತ್ತು. ತೆರೆಯ ಮೇಲೆ ಬೃಹತ್ ಗಾತ್ರದಲ್ಲಿ ವಿಷಯಗಳು ತಪ್ಪಾಗಿ ಕಾಣಿಸಿಕೊಳ್ಳುತ್ತಿದ್ದವು. ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದ ಸಂಸ್ಥೆ ಇಂಗ್ಲಿಷ್‌ನಲ್ಲಿದ್ದ ವಿಷಯವನ್ನು ಗೂಗಲ್ ಭಾಷಾಂತರದ ಮೂಲಕ ಕನ್ನಡಕ್ಕೆ ಭಾಷಾಂತರಿಸಿದ್ದರಿಂದಲೋ ಅಥವಾ ತಪ್ಪಾಗಿ ಭಾಷಾಂತರ ಮಾಡಿದ್ದರಿಂದಲೋ ಅಕ್ಷರಗಳು ತಪ್ಪಾಗಿ ಮೂಡುತ್ತಿದ್ದವು. ಒತ್ತಕ್ಷರಗಳು, ದೀರ್ಘ ಸ್ವರಗಳು ಇರಲಿಲ್ಲ. ಮೂಲ ಸೌಕರ್ಯಗಳು ಬದಲಾಗಿ ‘ಮೂಲ ಸೌಕರಯಗಳು’, ಉದ್ಯೋಗದ ಬದಲು ‘ಉದಯಂಗ’, ಕೈಗಾರಿಕ-‘ಕಂೃಗಾರಿಕಾ’, ಅಭಿವೃದ್ಧಿ ಬದಲು ‘ಅಭಿವೃದಧಿ’ ಎಂಬುದಾಗಿ ಪ್ರದರ್ಶನವಾಯಿತು. ಕನ್ನಡೇತರರಿಗೆ ಈ ಗುತ್ತಿಗೆ ನೀಡಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ, ಇನ್ನು ಮುಂದಾದರೂ ಕನ್ನಡ ಬಲ್ಲ ಕಂಪನಿಗಳಿಗೆ ಇಂತಹ ಕಾರ‌್ಯಕ್ರಮ ನಿರ್ವಹಣೆ ಕೊಡುವುದು ಸೂಕ್ತವೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

Follow Us:
Download App:
  • android
  • ios