Asianet Suvarna News Asianet Suvarna News

ಅ.8ರಿಂದ ಹೊರನಾಡ ಕನ್ನಡಿಗರ ಸಮಾವೇಶ

Kannada Conference To Begin on 8 in Delhi

ಬೆಂಗಳೂರು (ಅ.04):  ಹೊರನಾಡ ಕನ್ನಡಿಗರು ಎದುರಿಸು​ತ್ತಿ​ರು​ವ ಸಮಸ್ಯೆಗಳಿಗೆ ಪರಿಹಾರ ಕಂಡು​ಹಿಡಿ​ಯು​ವ ಆಶಯದಿಂದ ಅ.8, 9ರಂದು ದೆಹಲಿ​ಯಲ್ಲಿ ಪ್ರಥಮ ಬಾರಿಗೆ ಹೊರ​ನಾಡ ಕನ್ನಡಿಗರ ಸಮಾವೇಶ ಏರ್ಪಡಿ​ಸ​ಲಾ​ಗಿದೆ.

ಇದರಲ್ಲಿ ಗೋವಾ, ಮಹಾ​ರಾಷ್ಟ್ರ, ಮಧ್ಯಪ್ರದೇಶ ಮುಂತಾ​​ದ 14 ರಾಜ್ಯಗಳಲ್ಲಿರುವ ಅಂದಾ​​ಜು 600 ಪ್ರತಿನಿಧಿಗಳು ಪಾಲ್ಗೊ​ಳ್ಳ​​​ಲಿ​​ದ್ದಾರೆ ಎಂದು ಕನ್ನಡ ಸಾಹಿತ್ಯ ಪರಿ​ಷ​ತ್ತಿ​ನ ಅಧ್ಯಕ್ಷ ಮನು ಬಳಿಗಾರ್‌ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾ​ಗೋಷ್ಠಿ​ಯಲ್ಲಿ ಮಾತನಾಡಿ, ‘‘ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ನಡೆ​ಯ​​ಲಿರುವ ಈ ಸಮಾವೇಶಕ್ಕೆ ಛತ್ತೀಸ್‌​ಗಡ​ದ ಅಮರ್‌ಕಂಟಕ್‌ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿಯ ಕುಲಪತಿ​ಯಾ​ಗಿ​ರುವ ಕನ್ನಡಿ​ಗರಾದ ಡಾ.ತೇಜಸ್ವಿ ಕಟ್ಟೀ​ಮನಿ ವಿಶೇಷ ಆಸಕ್ತಿಯಿಂದ ಸಮಾವೇಕ್ಕೆ ವಿವಿಯು ಧನ ಸಹಾಯದ ಸಹಯೋಗ ನೀಡಿದೆ. ಸಮಾ​ವೇಶದಲ್ಲಿ ಮಂಡನೆಯಾಗುವ ವಿಚಾರ​ಗಳನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆ ಇದೆ'' ಎಂದು ಅವರು ಹೇಳಿದ್ದಾರೆ.

‘‘ಸಮ್ಮೇಳನದಲ್ಲಿ ಆಹ್ವಾನಿತರಾಗಿ ಪಾಲ್ಗೊಳ್ಳಲಿರುವ 23 ಸಾಹಿತಿ/ಕಲಾವಿದರನ್ನು ಕರ್ನಾಟಕ ಸರ್ಕಾರ ರಾಜ್ಯ ಅತಿಥಿಗಳೆಂದು ಪರಿಗಣಿಸಿದ್ದು, ಅವರೆಲ್ಲರ ಊಟ, ವಸತಿಗಳಿಗೆ ಕರ್ನಾಟಕ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. 40 ವರ್ಷಗಳ ಹಿಂದೆ ಜಿ.ಪಿ. ರಾಜರತ್ನಂ ಅಧ್ಯಕ್ಷತೆಯಲ್ಲಿ ದೆಹಲಿ​ಯಲ್ಲಿ 50ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದನ್ನು ಹೊರತುಪಡಿಸಿದರೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಂಥ ಸಮಾವೇಶ ನಡೆಯುತ್ತಿರುವುದು ಇದೇ ಮೊದಲು'' ಎಂದು  ಬಳಿಗಾರ್‌ ಹೇಳಿದ್ದಾರೆ.

‘‘ಭಾಷಾವಾರು ಪ್ರಾಂತ ರಚನೆ, ಶಿಕ್ಷಣ ಮಾಧ್ಯಮ, ಜಲ ವಿವಾದಗಳು, ಹೊರನಾಡ ಕನ್ನಡಿ​ಗರ ಸಮಸ್ಯೆಗಳು, ರಾಷ್ಟ್ರೀಯ ಉದ್ಯೋಗ ನೀತಿ, ವರ್ತಮಾನದ ತಲ್ಲಣ​​ಗಳು ವಿಷಯಗಳ ಕುರಿತ ಗೋಷ್ಠಿ​ಗಳಿ​ವೆ. ಜತೆಗೆ ಕವಿಗೋಷ್ಠಿ, ಜನಪದ ಗೀತೆ​ಗಳ ಗಾಯನ ಗೋಷ್ಠಿ, ಭರತನಾಟ್ಯ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯ​ಕ್ರಮಗಳೂ ನಡೆ​ಯಲಿವೆ'' ಎಂದು ಅವರು ವಿವರಿಸಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕೂ ಸಿದ್ಧತೆ: ‘‘ಏತನ್ಮಧ್ಯೆ ಡಿಸೆಂಬರ್‌ನಲ್ಲಿ ರಾಯ​ಚೂ​ರಿ​​ನಲ್ಲಿ ನಡೆಯಲಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಸಿದ್ಧತೆ​ಗಳು ನಡೆ​ದಿ​ದ್ದು, ಅಲ್ಲಿ ನಡೆಯ​ಬೇಕಾಗಿರುವ ಅಗತ್ಯ ಕಾಮಗಾರಿಗಳಿಗೆ ಸರ್ಕಾರ ಈಗಾ​ಗ​ಲೇ .4 ಕೋಟಿ ಬಿಡುಗಡೆ ಮಾಡಿದೆ. ಪ್ರತಿ​ದಿನವೂ 60ರಿಂದ 70 ಸಾವಿರ ಜನ ಪಾಲ್ಗೊ​ಳ್ಳಲಿರುವ ಈ ಸಮ್ಮೇಳನಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲು ಪ್ರಯತ್ನಿಸ​ಲಾಗುತ್ತಿದೆ'' ಎಂದು ಹೇಳಿದ್ದಾರೆ.

Follow Us:
Download App:
  • android
  • ios