ಮೈಸೂರು[ನ.15] "ಬದುಕಲು ಕಲಿಯಿರಿ" ಕೃತಿ ಮೂಲಕ ಮನೆಮಾತಾಗಿದ್ದ ಶ್ರೀ ಜಗದಾತ್ಮಾನಂದ ಸ್ವಾಮೀಜಿ (89) ಗುರುವಾರ ರಾತ್ರಿ 7.30ಕ್ಕೆ ವಿಧಿವಶರಾದರು. ಮೃತರು ಕೊಡಗಿನ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕರು.

ನ್ಯುಮೋನಿಯಾದಿಂದ ಕಳೆದೊಂದು ತಿಂಗಳಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀಗಳ "ಬದುಕಲು ಕಲಿಯಿರಿ" ಸರಣಿಯ ಪುಸ್ತಕಗಳು 9 ಭಾಷೆಗೆ ಅನುವಾದಗೊಂಡು ದಾಖಲೆ ಮೆರೆದಿವೆ.ನಾಳೆ ರಾಮಕೃಷ್ಣ ಶಾರದಾಶ್ರಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ರಾಮಕೃಷ್ಣಾಶ್ರಮದ ಸ್ವಾಮಿ ಜಗದಾತ್ಮಾನಂದ ಅವರು ಬರೆದ 'ಬದುಕಲು ಕಲಿಯಿರಿ ಎಂಬ ಪುಸ್ತಕ ಕನ್ನಡ ಪ್ರಕಾಶನದಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿದೆ. ಮೊದಲನೆಯ ಭಾಗ 1981ರಲ್ಲಿ ಪ್ರಕಟವಾಗಿದ್ದು, ಹದಿಮೂರನೆಯ ಮುದ್ರಣ 2003 ರಲ್ಲಿ ಪ್ರಕಟವಾಯಿತು. ಈ ವೇಳೆ, ಒಟ್ಟು 85 ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಇದರ ಎರಡನೆಯ ಭಾಗ 1986ರಲ್ಲಿ ಬೆಳಕಿಗೆ ಬಂತು. ಇದರ ಒಂಭತ್ತನೆಯ ಮುದ್ರಣ 2002 ರಲ್ಲಿ ಪ್ರಕಟವಾಗಿತ್ತು.