ಫೇಸ್‌ಬುಕ್‌ನಲ್ಲಿ ತಾವು ಹಾಕಿದ ಸ್ಟೇಟಸ್‌ವೊಂದಕ್ಕೆ ಅವಹೇಳನಕಾರಿ ಕಮೆಂಟ್ ಹಾಕಿದವರ ವಿರುದ್ಧ ಬಿಗ್‌ಬಾಸ್ ಖ್ಯಾತಿಯ ರೆಹಮಾನ್ ಖಾನ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ಫೇಸ್ಬುಕ್ನಲ್ಲಿ ತಾವು ಹಾಕಿದ ಸ್ಟೇಟಸ್ವೊಂದಕ್ಕೆ ಅವಹೇಳನಕಾರಿ ಕಮೆಂಟ್ ಹಾಕಿದವರ ವಿರುದ್ಧ ಬಿಗ್ಬಾಸ್ ಖ್ಯಾತಿಯ ರೆಹಮಾನ್ ಹಾಸನ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಾವು ಅಭಿನಯಿಸಿದ ಸಿನಿಮಾದ ಪೋಸ್ಟರ್ ಹಾಕಿದ್ದರು ರೆಹಮಾನ್. ಅದಕ್ಕೆ ಪ್ರತಿಯಾಗಿ ಎರಡು ಕೋಮುಗಳ ನಡುವೆ ಸಂಘರ್ಷಕ್ಕೀಡು ಮಾಡುವ ಕಮೆಂಟ್ ಮಾಡಿದ ತಾರಾನಾಥ್ ಹರೀಶ್ ಎಂಬುವವರ ವಿರುದ್ಧ ರೆಹಮಾನ್ ದೂರು ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ 'ಗರ' ಎಂಬಾ ಸಿನಿಮಾದ ಪೋಸ್ಟರ್ ಪೋಸ್ಟ್ ಮಾಡಿದ್ದರು ರೆಹಮಾನ್.
