ಕನ್ನಡದಲ್ಲಿ ವಿಜ್ಙಾನ ತಂತ್ರಜ್ಙಾನಕ್ಕೆ ಸಂಬಂಧಿಸಿದ ಪದಗಳು ಬರೆಯಲು ಬರೊಲ್ಲಾ ಅನ್ನೋದೆಲ್ಲಾ ಸುಳ್ಳು.. ಹಲವಾರು ಜನರು ಕನ್ನಡದಲ್ಲೇ ಕಲಿತು ಮಹಾನ್ ವಿಜ್ಞಾನಿಗಳಾಗಿರುವ ಉದಾಹರಣೆಗಳು ನಮ್ಮ ಮುಂದಿವೆ.. ಅಷ್ಟೇ ಏಕೆ ನಾನೂ ಕೂಡ ಕನ್ನಡದಲ್ಲೇ ಕಲಿತು ಸಿಎಂ ಆಗಿಲ್ಲವೇ

ರಾಯಚೂರಿನಲ್ಲಿ 3 ದಿನಗಳ ಕಾಲ ನಡೆಯುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು. ರಾಯಚೂರು ಹೊರವಲಯದ ಕೃಷಿ ವಿವಿ ಆವರಣದಲ್ಲಿ ಸಮ್ಮೇಳನ ಆಯೋಜಿಸಿದ್ದು, ಸಿಎಂ ಸಿದ್ದರಾಮಯ್ಯ ಕನ್ನಡ ಜಾತ್ರೆಯನ್ನು ಉದ್ಘಾಟಿಸಿದರು. ಸಮ್ಮೇಳನದಲ್ಲಿ ಮಾತನಾಡಿದ ಸಿಎಂ ಮಾತೃಭಾಷೆಯಲ್ಲಿಯೇ ಶಿಕ್ಷಣ ಆಗಬೇಕು. ಆದ್ರೆ ಸುಪ್ರೀಂಕೋರ್ಟ್​ ತೀರ್ಪಿನಿಂದ ಹಿನ್ನಡೆಯಾಗಿದೆ. ಇದರಿಂದ ಕನ್ನಡ ಮಾತ್ರವಲ್ಲ ಪ್ರಾದೇಶಿಕ ಭಾಷೆಗಳು ಅಸ್ಥಿತ್ವ ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಕನ್ನಡದಲ್ಲಿವಿಜ್ಙಾನತಂತ್ರಜ್ಙಾನಕ್ಕೆಸಂಬಂಧಿಸಿದಪದಗಳುಬರೆಯಲುಬರೊಲ್ಲಾಅನ್ನೋದೆಲ್ಲಾಸುಳ್ಳು.. ಹಲವಾರುಜನರುಕನ್ನಡದಲ್ಲೇಕಲಿತುಮಹಾನ್ವಿಜ್ಞಾನಿಗಳಾಗಿರುವಉದಾಹರಣೆಗಳುನಮ್ಮಮುಂದಿವೆ.. ಅಷ್ಟೇಏಕೆನಾನೂಕೂಡಕನ್ನಡದಲ್ಲೇಕಲಿತುಸಿಎಂಆಗಿಲ್ಲವೇಎಂದರು

ಇದೇ ವೇಳೆ ಪ್ರತ್ಯೇಕ ರಾಜ್ಯ ಕೂಗಿಗೆ ಸಿಎಂ ಆಕ್ರೋಶ ವ್ಯಕ್ತ ಪಡಿಸಿದ್ದು, ಇನ್ನು ಮುಂದೆ ರಾಜ್ಯೋತ್ಸವ ಆಚರಣೆಗಾಗಿ ಜಿಲ್ಲಾಡಳಿತಕ್ಕೆ ಪ್ರತ್ಯೇಕ ಅನುದಾನದ ಘೋಷಣೆ ಮಾಡಲಾಗುವುದು, ಬರುವ ಬಜೆಟ್ ನಂತ್ರ ಇದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.

ತನ್ವೀರ್ ಸೇಠ್ ಮಾತನಾಡಿ, ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದರು.

ಸಮ್ಮೇಳನಾಧ್ಯಕ್ಷರಾಗಿರುವ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಸುದೀರ್ಘ ಭಾಷಣದಲ್ಲಿ ಕನ್ನಡ ಉಳಿಸಿ ಬೆಳೆಸಲು ಸರ್ಕಾರಕ್ಕೆ ಹತ್ತಾರು ಮಾರ್ಗದರ್ಶನ ನೀಡಿದ್ರು. ಅಷ್ಟೇ ಅಲ್ಲದೇ ಎಂ.ಎಂ ಕಲಬುರಗಿ ಹತ್ಯೆ ಹಂತಕರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯಪರಿಷತ್ತಿನ ಪರಿಷ್ಕ್ರತ ವೆಬ್ ಸೈಟನ್ನು ಸಿಎಂ ಉದ್ಘಾಟಿಸಿದರು. ಇದೇ ವೇಳೆ ಸಮ್ಮೇಳನದಲ್ಲಿ ಹಲವಾರು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇನ್ನೆರಡು ದಿನ ರಾಯಚೂರಿನಲ್ಲಿ ಈ ಅಕ್ಷರ ಜಾತ್ರೆ ನಡೆಯಲಿದೆ.