ರೈಲ್ವೇ ಟಿಕೆಟ್’ನಲ್ಲಿ ಹಿಂದಿ, ಇಂಗ್ಲೀಷ್ ಜೊತೆ ರಾರಾಜಿಸಲಿದೆ ಕನ್ನಡ

First Published 1, Mar 2018, 11:09 AM IST
Kannada added to Railway Ticket
Highlights

ರೈಲ್ವೆಯಲ್ಲಿ ಕೊನೆಗೂ ಕನ್ನಡ ಭಾಷೆಗೆ  ನ್ಯಾಯ ಸಿಗುವ ಕಾಲ ಕೂಡಿ ಬಂದಿದೆ. ಇನ್ನು ಮುಂದೆ ರೈಲ್ವೆ ಟಿಕೆಟ್‌ನಲ್ಲಿ ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡವೂ  ರಾರಾಜಿಸಲಿದೆ.

ಬೆಂಗಳೂರು (ಮಾ. 01): ರೈಲ್ವೆಯಲ್ಲಿ ಕೊನೆಗೂ ಕನ್ನಡ ಭಾಷೆಗೆ  ನ್ಯಾಯ ಸಿಗುವ ಕಾಲ ಕೂಡಿ ಬಂದಿದೆ. ಇನ್ನು ಮುಂದೆ ರೈಲ್ವೆ ಟಿಕೆಟ್‌ನಲ್ಲಿ ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡವೂ  ರಾರಾಜಿಸಲಿದೆ.

ನೈಋತ್ಯ ರೈಲ್ವೆಯು ಕನ್ನಡದಲ್ಲಿ  ಪ್ರಾಯೋಗಿಕವಾಗಿ ಕಾಯ್ದಿರಿಸದ ಟಿಕೆಟ್ ಮುದ್ರಿಸಲು  ನಿರ್ಧರಿಸಿದ್ದು, ರೈಲ್ವೆ ಮಂಡಳಿಯ ಒಪ್ಪಿಗೆಗೆ ಕಳುಹಿಸಿದೆ. ಕಳೆದ ಹಲವು ವರ್ಷಗಳಿಂದ ರೈಲ್ವೆ ಟಿಕೆಟ್‌ನಲ್ಲಿ  ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ನೀಡಬೇಕು ಎಂದು  ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ  ಹೋರಾಟಗಳು ನಡೆಯುತ್ತಿವೆ. ಇದೀಗ ಆ ಹೋರಾಟಕ್ಕೆ ಫಲ ಸಿಗುವ ಕಾಲ ಸಮೀಪಿಸಿದೆ.

loader